NEWS

ಸಂಚಲನ ಸೃಷ್ಟಿಸಲಿದೆ ಹನುಮಾನ್ ಚಾಲೀಸ ಪಾರಾಯಣ : ಶ್ರೀವತ್ಸ

ಪಾಲನೆ ನ್ಯೂಸ್

ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ಬೆಳಗ್ಗೆ 9ಘಂಟೆಯಿಂದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ನಡೆಯಲಿರಯವ

ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾ ಯಜ್ಞದಲ್ಲಿ ಮೈಸೂರಿಗರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮನ ಸ್ಮರಣೆ ಮಾಡಿ ಹಿಂದೂ ಸಮಾಜದ ರಕ್ಷಣೆಗೆ ಕೈಜೋಡಿಸಬೇಕೆಂದು ಶಾಸಕ ಟಿಎಸ್. ಶ್ರೀವತ್ಸ ರವರು ಕರೆ ನೀಡಿದರು.

ಗಣಪತಿ ಸಚ್ಚಿದಾನಂದ ಆಶ್ರಮದಿಂದ ಹೊರಟ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಪ್ರಚಾರ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿಎಸ್. ಶ್ರೀವತ್ಸ ರವರು ಮೈಸೂರಿನ ಸರ್ವಜನಾಂಗದವರು ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮಂತರ ಪ್ರದೇಶ ಹಳ್ಳಿಹಳ್ಳಿಯಿಂದ ಹನುಮಾನ್ ಚಾಲೀಸ ಪಾರಾಯಣದಲ್ಲಿ

ಭಾಗವಹಿಸಲು ಉತ್ಸುಕರಾಗುತ್ತಿದ್ದಾರೆ ಖುಷಿಯಿಂದ ಸಂಘಟಿತರಾಗುತ್ತಿದ್ದಾರೆ ಎಂದರೆ ಹಿಂದೂ ಸಮಾಜದ ರಕ್ಷಣೆಗೆ ಗಣಪತಿಸಚ್ಚಿದಾನಂದ ಸ್ವಾಮೀಜಿ ಯವರ ಹನುಮಾನ ಚಾಲೀಸ ಕಾರ್ಯಕ್ರಮ ಪ್ರೇರಣೆಯಾಗಿದೆ ಆಧ್ಯಾತ್ಮಿಕ ಲೋಕವೆ ಸೃಷ್ಟಿಯಾಗಲಿದೆ,

ಆಂಜನೇಯನ ಭಕ್ತರು ಲಕ್ಷಕಂಠದಿಂದ ಜೈ ಹನುಮಾನ್ ಎಂದು ಘೋಷಣೆ ಹಾಕಿದಾಗ ಅದರಲ್ಲಿ ಸಿಗುವ ಆನಂದ ಪುಣ್ಯ ಅದ್ಭುತವಾದುದು ಮೈಸೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಇದೇ ಸಂಧರ್ಭದಲ್ಲಿ ಶಾಸಕ ಟಿಎಸ್. ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಸುಬ್ಬಯ್ಯ, ಬಿಜೆಪಿ ಮುಖಂಡ ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಪ್ರದೀಪ್ ಕುಮಾರ್, ಪ್ರಜೇಶ್ ಕುಮಾರ್, ಗೋಲ್ಡ್ ಸುರೇಶ್, ಆಶ್ರಮದ ರಮೇಶ್, ಇನ್ನಿತರರು ಇದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಹಾವೀರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಿ : ಪಿ. ರವಿಕುಮಾರ್

ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಅಕ್ರಮವಾಗಿ ದಾಸ್ತಾನು ಮಾಡುವುದು ಕಾನೂನುಬಾಹಿರ

ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದ ಟ್ರಂಪ್

Leave a Comment