NEWS

ಮಲ್ನಾಡು ಗಿಡ್ಡಗಳ ಸಂರಕ್ಷಣಾ ಅಭಿಯಾನ ಸೂಳ್ಯ

ಪಾಲನೆ ನ್ಯೂಸ್

ಮಂಡ್ಯ: ಪ್ರಗತಿ ಸೇವಾ ಟ್ರಸ್ಟ್ ( ರಿ) ಪಾಂಡವಪುರ ಹಾಗೂ ಮಲ್ನಾಡು ಗಿಡ್ಡಗಳ ಸಂರಕ್ಷಣಾ ಅಭಿಯಾನ ಸೂಳ್ಯ ಸಹಯೋಗದೊಂದಿಗೆ ಪಾಂಡವಪುರ ತಾಲ್ಲೂಕು ರಾಗಿಮುದ್ದನಹಳ್ಳಿಯ ಪ್ರತಿಮಾ ನಿಲಯದ ಸಾವಯವ ತೋಟದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠ ಸಂಸ್ಥಾಪಕರಾದ ಭೈರವೈಕ್ಯ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮಿಗಳ ಜನ್ಮದಿನದ ಅಂಗವಾಗಿ ರೈತರಿಗೆ ಉಚಿತ ಗೋದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಾಂಡವಪುರ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಯುತ ರವಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ರೈತರಿಗೆ ಬೇಸಾಯದ ಬಗ್ಗೆ ಪಶು ಸಂಗೋಪನೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಾಧ್ಯವಾಗುತ್ತದೆ ಇದರ ಉಪಯೋಗವನ್ನು ಪಡೆದುಕೊಳ್ಳಲು ರೈತರಿಗೆ ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಬಿ.ಸಿ.ವಿಜಯಕುಮಾರ್ ಬಲ್ಲೇನಹಳ್ಳಿ ಮಾತನಾಡಿ ಭೂಮಿತಾಯಿಗೆ ರಾಸಾಯನಿಕ ವಸ್ತುಗಳು ಮತ್ತು ಕೀಟನಾಶಕ ಔಷಧಿಗಳನ್ನು ಸಿಂಪಡಿಸಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ .ಆದ್ದರಿಂದ ನಮ್ಮ ಪೂರ್ವಿಕರ ಸಾವಯವ ಬೇಸಾಯವನ್ನು ಉತ್ತೇಜಿಸಬೇಕು ಮತ್ತು ದೇಶಿಯ ತಳಿಗಳ ಸಾಕಾಣಿಕೆ ಹೆಚ್ಚಬೇಕು.ಮಲೆನಾಡಿನ ಭಾಗದಲ್ಲಿ ಮಲ್ನಾಡ್ ದೇಶಿಯ ತಳಿಗಳನ್ನು ನಾಡಿನಾದ್ಯಂತ ಸಾಕುವಂತೆ ಪ್ರೇರೇಪಣೆ ಮಾಡುತ್ತಿರುವ ಶ್ರೀಯುತ ಅಕ್ಷಯ್ ಆಳ್ವಾ ಅವರ ಪ್ರಯತ್ನ ಸ್ಮರಣೀಯವಾದದ್ದು.ಇತ್ತೀಚಿನ ಹಾಲಿನ ಉತ್ಪನ್ನಗಳು ರಾಸಾಯನಿಕ ಯುಕ್ತವಾಗಿವೆ.

ದೇಶಿಯ ತಳಿಯ ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಆರೋಗ್ಯವಂತ ಮಾನವ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ .ಸಾವಯವ ಬೇಸಾಯಕ್ಕೆ ಬೇಕಾದ ಜೈವಿಕ ಗೊಬ್ಬರವನ್ನು ನೀಡುವ ದೇಶಿಯ ತಳಿಗಳ ಸಾಗಾಣಿಕೆಯನ್ನು ಹೆಚ್ಚಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ದೇಶಿಯ ತಳಿಗಳ ಸಾಗಾಣಿಕೆ ಬಹಳ ಉತ್ತಮ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ರಾಗಿಮುದ್ದನಹಳ್ಳಿ ನಾಗೇಶ್ ಮಾತನಾಡಿ ನಮ್ಮ ದೇಶಿಯ ತಳಿಗಳ ಉಳಿವು ಬಹಳ ಅವಶ್ಯಕ ಹಾಲು ಗಂಜಲ ಸಗಣಿ ಎಲ್ಲವೂ ಕೂಡ ಭೂಮಿಗೆ ಮತ್ತು ಮನುಷ್ಯರ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿವೆ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ವಿವಿಧ ಗ್ರಾಮಗಳ ಆಸಕ್ತ ರೈತರಿಗೆ ಒಂದು ಗಂಡು, ಒಂದು ಹೆಣ್ಣು ಮಾಲ್ನಾಡ್ ತಳಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ದೇಶಿಯ ತಳಿಗಳ ಸಾಗಣಿಕೆಯನ್ನು ಉತ್ತೇಜಿಸಲಾಗುತ್ತಿದೆ ಸ್ವಾಮಿಗಳ ಜನ್ಮ ದಿನದ ಅಂಗವಾಗಿ 5 ಜೊತೆ ಗೋ ದಾನ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಅಕ್ಷಯ ಕಿಕ್ಕೇರಿ ಆರ್ ಎಂ ನಾಗೇಶ್ , ಅಶೋಕ, ಶ್ರೀಮತಿ ಸೌಜನ್ಯ ವಿವಿಧ ಭಾಗದ ರೈತರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನ್ಯಾಯಮೂರ್ತಿಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಅರ್ಜಿ ಪರಿಶೀಲನೆ:

ಧರ್ಮಸ್ಥಳದ ಸಾಮೂಹಿಕ ವಿವಾಹಕ್ಕೆ 105 ವಧು-ವರರಿಂದ ನೋಂದಣಿ

ಮ್ಯೂಚುವಲ್ ಫಂಡ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

Leave a Comment