ಪಾಲನೆ ನ್ಯೂಸ್
ನಾಪೋಕು : ಕಕ್ಕಬ್ಬೆ ಬಳಿಯ ದಿ ತಾಮರರೆಸಾರ್ಟ್ ವತಿಯಿಂದ ಭಾಗಮಂಡಲದ ತಲಕಾವೇರಿ ದೇವಾಲಯದ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ತಲಕಾವೇರಿದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ ಕಸದ ರಾಶಿಗಳನ್ನು ಶೇಖರಿಸಿ ಸುಮಾರು೨೫ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಸಗಳನ್ನು ಸಂಗ್ರಹಿಸಲಾಯಿತು. ರೆಸಾರ್ಟ್ನ ಮ್ಯಾನೇಜರ್ ಶಕ್ತಿ ತರಣ್ ಮಾತನಾಡಿ, ಪ್ರವಾಸಿಗರು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸುವ ಕೊಡಗಿನ ಪ್ರದೇಶವಾಗಿದೆ. ಕೊಡಗು, ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರವಾಸಿಗರು ಕಸದ ರಾಶಿಗಳನ್ನು ರಸ್ತೆ ಬದಿಯಲ್ಲಿ ಬಿಸಾಡದೆಕೊಡಗಿನ ಸ್ವಚ್ಛತೆಯನ್ನುಕಾಪಾಡಬೇಕೆಂದು ತಿಳಿಸಿದರು.
ನಮ್ಮಸಂಸ್ಥೆಯ ಸಿಬ್ಬಂದಿಗಳು ತಿಂಗಳಿಗೊಮ್ಮೆ ಕೊಡಗುಜಿಲ್ಲೆಯ ಹಲವಾರು ಭಾಗಗಳಲ್ಲಿ ಸ್ವಚ್ಛತಾಕಾರ್ಯಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲೂ ಸಹ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೇವಸ್ಥಾನ ಹಾಗೂ ಇನ್ನಿತರ ಪ್ರವಾಸಿ ತಾಣಗಳಲ್ಲಿ ಸಹ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ತಾಮರ ರೆಸಾರ್ಟ್ ೨೫ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
