NEWS

ಕಳೆದ ಬಾರಿಗಿಂತಲೂ ವಿಭಿನ್ನ ಹಾಗೂ ವಿಶಿಷ್ಟವಾಗಿ ಫಲಪುಷ್ಪ ಪ್ರದರ್ಶನ: ಕೆ.ಆರ್.ನಂದಿನಿ

5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ

ಪಾಲನೆ ನ್ಯೂಸ್

ಮಂಡ್ಯ: ಕಳೆದ ಬಾರಿಗಿಂತಲೂ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾಗಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್. ನಂದಿನಿ ಅವರು ಹೇಳಿದರು.

ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಸಂಬಂಧಿಸಿದಂತೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸದರಿ ವರ್ಷ ಫಲಪುಷ್ಪ ಪ್ರದರ್ಶನದ ಟಿಕೆಟ್ ದರವನ್ನು ವಯಸ್ಕರಿಗೆ ರೂ. 30 ಮತ್ತು ಮಕ್ಕಳಿಗೆ ರೂ. 20 ಮತ್ತು ಶಾಲಾ ವಿದ್ಯಾರ್ಥಿಗಳಿಗೆ (ಯೂನಿಫಾರ್ಮ್ ನಲ್ಲಿ ಬರುವ ಮಕ್ಕಳಿಗೆ) ಉಚಿತ ಎಂದು ತಿಳಿಸಿದರು.

ಎರಡೂವರೆ ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಬಳಸಿ ಜೇನಿನ ಪರಿಕಲ್ಪನೆ, ಕ್ಯಾಪ್ಸಿಕಂ ಮನೆ, ಡಾಲ್ಫಿನ್, ಅಣಬೆ ಬೇಸಾಯ, ಕಪ್ ಮತ್ತು ಸಾಸಾರ್, ವಿವಿಧ ಹಣ್ಣುಗಳ ಮಾದರಿ ಮತ್ತು ಜಿರಾಫೆಯ ಆಕರ್ಷಕ ಹೂವಿನ ಆಕೃತಿಗಳ ರಚನೆ ಮಾಡಲಾಗಿದೆ ಎಂದು ಹೇಳಿದರು.

ಎಂಭತ್ತು ಸಾವಿರಕ್ಕೂ ಹೆಚ್ಚು ಇಪ್ಪತ್ತೈದು ವಿವಿಧ ತಳಿಯ ಅಲಂಕಾರಿಕ ಗಿಡಗಳನ್ನು ಹೂ ಕುಂಡಗಳಲ್ಲಿ ಹಾಗೂ ಐವತ್ತು ಸಾವಿರ ಹೂವಿನ ಸಸಿಗಳನ್ನು ನಡೆದಾಡುವ ಇಕ್ಕೆಲಗಳಲ್ಲಿ, ಟೋರೇನಿಯಂ, ಹೈಡ್ರಾಂಜಿಯಾ, ದಾಸವಾಳ, ಫ್ರೆಂಚ್ ಮಾರಿಗೋಲ್ಡ್, ಕಾಕ್ಸ್ ಕೊಂಬ್, ವೆರ್ಬೆನಾ, ಪೆಟುನಿಯಾ, ಆಂಟಿನಂ, ಸೂರ್ಯಕಾಂತಿ, ಫ್ಯಾನ್ಸಿ, ಕಾಸ್ಮೋಸ್, ಕೊಲಾಂಚಿಯ, ಗಜೇನಿಯಾ ಮುಂತಾದವುಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕೃಷಿ ಇಲಾಖೆ ವತಿಯಿಂದ ರೈತ ಮಹಿಳೆಯರಿಗೆ ಉತ್ತೇಜನ ನೀಡಲು ಯಾಂತ್ರೀಕೃತ ಯೋಜನೆಯಡಿ Combined harvester ಹಾಗೂ ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸುವುದು. ಪಶುಪಾಲನ ಮತ್ತು ಪಶುವೈದ್ಯ ಸೇವೆ ಇಲಾಖೆಯಿಂದ ಕೋಳಿಗಳನ್ನು ಹೂವಿನ ಕಲಾಕೃತಿಯಲ್ಲಿ ಹಾಗೂ ಕುಕ್ಕುಟ ಸಂಜೀವಿನಿ ಯೋಜನೆಯನ್ನು ಕಲಾಕೃತಿಯನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕಳೆದ ಬಾರಿಯಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯವರು ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಉತ್ತಮಗುಣಮಟ್ಟದ ಸೀರೆಗಳನ್ನು ಒದಗಿಸುವುದು. ತಾಯಿ ಎದೆ ಹಾಲಿನ ಮಹತ್ವದ ಕುರಿತು ತಿಳಿಸಲು ಆರೋಗ್ಯ ಇಲಾಖೆಯಿಂದ ಅಮೃತಧಾರೆ ಯೋಜನೆ ಕಾರ್ಯಕ್ರಮದ ಕುರಿತು ಮಗುವಿಗೆ ತಾಯಿ ಹಾಲು ನೀಡುವ ಬಗ್ಗೆ ಹಾಗೂ ಸಹಜ ಹೆರಿಗೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸುವುದು ಎಂದು ತಿಳಿಸಿದರು.

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಅರಣ್ಯ ಇಲಾಖೆಯವರು ಸಾಲುಮರದ ತಿಮ್ಮಕ್ಕ ರವರ ಸಾಧನೆಯ ಜೊತೆಗೆ ಅರಣ್ಯದ ಮರುಕಲ್ಪನೆಯನ್ನು  ಕಲಾಕೃತಿಯಲ್ಲಿ ಪ್ರದರ್ಶಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಬಿಸಿ ಊಟ ಕಾರ್ಯಕ್ರಮದಲ್ಲಿ “ನಮ್ಮ ನಡೆ ಅಡಿಗೆಮನೆ ಕಡೆಗೆ” ಎಂಬುದರ ಬಗ್ಗೆ ಕ್ಯಾಪ್ಸಿಕಂ ಮನೆಯ ಕಲಾಕೃತಿಯನ್ನು ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಕ್ಕನ ಮನೆ ಮೀನು ಊಟ ಯಶಸ್ಸಿಯಾಗಿದೆ. ಮೀನು ಸೇವನೆ ಆರೋಗ್ಯಕ್ಕೆ ಉತ್ತಮ ಹಾಗೂ ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯಕ್ಕೂ ಒಳ್ಳೆಯದು. ಮೀನುಗಾರಿಕೆ ಇಲಾಖೆಯಿಂದ ವಿವಿಧ ತಳಿಯ ಮೀನುಗಳ ಜೋಡಣೆ, ಅಕ್ಟೋರಿಯಂ ಹಾಗೂ ಮತ್ಯ ಸಂಜೀವಿನಿ, ಅಕ್ಕನ ಮನೆಯ ಮೀನು ಊಟದ ಬಗ್ಗೆ ಒಂದು ಪರಿಕಲ್ಪನೆಯನ್ನು ಕಲಾಕೃತಿ ಮಾಡಲಾಗಿದೆ ಎಂದರು.

ರೇಷ್ಮೆ ಇಲಾಖೆಯವತಿಯಿಂದ ರೇಷ್ಮೆಹುಳುವಿನ ಕಲಾಕೃತಿಯಲ್ಲಿ ಪ್ರದರ್ಶನ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರವಾಸ ತಾಣಗಳ ಹಾಗೂ ದೇವಸ್ಥಾನಗಳ ಕಲಾಕೃತಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಮಹಿಳಾ ಕ್ರಿಕೇಟ್ ನಲ್ಲಿ ಮಹಿಳೆಯರು ಗೆದ್ದಿರುವ ವಿಶ್ವಕಪ್ ಹಾಗೂ ಅಂಧರ ವಿಶ್ವಕಪ್ ಬಗ್ಗೆ ಪ್ರತಿಕೃತಿಗಳನ್ನು ನಿರ್ಮಿಸಿ ಯಾವುದೇ ತಾರತಮ್ಯವಿಲ್ಲದೆ ಮಹಿಳೆಗೆ ಅವಕಾಶ ನೀಡಿದ್ದಲ್ಲಿ ಪುರುಷನಷ್ಟೇ ಸಾಧಿಸಬಲ್ಲಳು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಮತದಾನದ ಬಗ್ಗೆ ಸೆಲ್ಫಿ ಪಾಯಿಂಟ್ ಗಳನ್ನು ಕಲಾಕೃತಿಯಲ್ಲಿ ಪ್ರದರ್ಶಿಸಲಾಗಿದೆ. Helmet ಧರಿಸಿ ವಾಹನ ಚಲಾಯಿಸುವುದು ಹಾಗೂ ಸಿಗ್ನಲ್ ಗಳನ್ನು ಪಾಲಿಸುವಂತೆ (ಜೀವಕ್ಕಿಂತ ದೊಡ್ಡದಲ್ಲ, ಒಂದು ನಿಮಿಷ) ಎಂಬ ಘೋಷವಾಕ್ಯದಡಿ ಹೂವಿನ ಜೋಡಣೆಯಲ್ಲಿ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಕಬ್ಬಿನ ಮನೆ, ಟೈರ್ ಫ್ಲವರ್ ಆರ್ಟ್, ಸ್ಯಾಂಡ್ ಆರ್ಟ್ ಹಾಗೂ ಜಾನೋರ್ ಆರ್ಟ್ ಇನ್ನೂ ಮುಂತಾದ ಕಲಾಕೃತಿಯನ್ನು ಪ್ರದರ್ಶಿಸಲಾಗುವುದು. 5-6 ಸೆಲ್ಫ್ ಪಾಯಿಂಟ್ಸ್ ಗಳನ್ನು ಹಾಗೂ ತರಕಾರಿಗಳನ್ನು ಬಳಸಿ ವಿವಿಧ ಕಲಾಕೃತಿಗಳ ಕೆತ್ತನೆಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸದರಿ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸುವೇಧ, ತೋಟಗಾರಿಕೆ ಸಂಘದ ನಿರ್ದೇಶಕರುಗಳಾದ ಶ್ರೀಧರ್ ಜೈನ್, ಬೋರೆಗೌಡ, ಕುಮಾರ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಮೊಜಬಾ ಖಮೇನಿ ಕೂಡ ಇದೀಗ ಜೀವಂತ ಶವವಾಗಿದ್ದಾರೆ

ಹಂಪಿಯಲ್ಲಿ ತುಂಗಾರತಿ ; ಕಾಶಿಯ ಗಂಗಾರತಿ ರೀತಿ !

69 ವರ್ಷದ ಮಾಜಿ ಜಡ್ಜ್ ಗೆ ಕೋಟಿ ರೂ. ಧೋಖಾ

Leave a Comment