NEWS

ಡಾ. ಶಿವಕುಮಾರ ಸ್ವಾಮೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳೋಣ: ಟಿ.ಎಸ್.‌ ಸತ್ಯಾನಂದ

ಮಂಡ್ಯ ವಕೀಲರ ಸಂಘದಲ್ಲಿ ತ್ರಿವಿಧ ದಾಸೋಹಿ ಪುಣ್ಯ ಸ್ಮರಣೆ

ಪಾಲನೆ ನ್ಯೂಸ್‌

ಮಂಡ್ಯ: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹಿ. ಅವರ ಪುಣ್ಯಸ್ಮರಣೆ ಅತ್ಯಂತ ಪುಣ್ಯದ ದಿನ ಎಂದು ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಟಿ ಎಸ್ . ಸತ್ಯಾನಂದ ತಿಳಿಸಿದರು.

ಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೆ ಅಂಗವಾಗಿ ವಕೀಲರ ಸಂಘದಲ್ಲಿ ಬುಧವಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ. ಶಿವಕುಮಾರ ಸ್ವಾಮೀಜಿಗಳ ಕಾಲದಲ್ಲಿ ಬದುಕಿರುವುದೇ ನಮ್ಮ ಪುಣ್ಯ. ಅವರ ಆದರ್ಶ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜನ್ಮ ಸಾರ್ಥಕ ಎಂದರು.

ವಕೀಲರು ಮತ್ತು ವಕೀಲರ ಸಂಘ ಸಮಾಜಕ್ಕೆ ಮಾದರಿಯಾಗಬೇಕು. ಹಾಗಾಗಿ ಎಲ್ಲ ಶ್ರೀಗಳ ಪುಣ್ಯ ಸ್ಮರಣೆಯನ್ನು ಮುಂದಿನ ವರ್ಷದಿಂದ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಎಸ್.‌ ದೇವರಾಜು ಪಂಡಿತ್‌ ಮಾತನಾಡಿ, ಡಾ. ಶಿವಕುಮಾರ ಶ್ರೀಗಳು ಜ್ಞಾನ, ಅಕ್ಷರ, ಅನ್ನ ದಾಸೋಹ ನಡೆಸಿ ಸಮಾಜವನ್ನು ಆಧ್ಯಾತ್ಮಿಕವಾಗಿ ಕಟ್ಟಿದವರು. ಅವರ ದಾರಿಯಲ್ಲಿ ಮುನ್ನಡೆಯೋಣ. ಅವರ ಬಾಳಿನ ಸಾಸಿವೆಯಷ್ಟಾದರೂ ಅನುಸರಿಸಿದರೆ ನಮ್ಮ ಜೀವನ ಸಾರ್ಥಕ ಎಂದು ಹೇಳಿದರು.

ಸಂಘದ ಖಜಾಂಚಿ ಚಂದ್ರಕಲಾ, ಹಿರಿಯ ವಕೀಲರಾದ ಜಿ.ಎಸ್.‌ ಮಹದೇವಸ್ವಾಮಿ, ಎಚ್‌.ಎಂ. ಅಣ್ಣಯ್ಯ, ಕೆ.ಎಂ. ಬಸವರಾಜು, ಗುರುಪ್ರಸಾದ್‌, ನೋಟರಿ ಸೌಮ್ಯ ಸಿದ್ದರಾಜು, ಸಂಘದ ಸದಸ್ಯರು ಹಾಜರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.

Related posts

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ದಾಖಲೆ ಮಾಡಿದೆ: ನಿಖಿಲ್ ಆರೋಪ

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

ರೈತರ ಸಮಸ್ಯೆ ಪರಿಹರಿಸುವಂತೆ ಆಗ್ರಹ

Leave a Comment