NEWS

ಕಂದಾಯ ಇಲಾಖೆಯಲ್ಲಿ ನೌಕರರು ಒಕ್ಕೊರಲನಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು: ಡಾ.ಕುಮಾರ

ಪಾಲನೆ ನ್ಯೂಸ್

‌ಮಂಡ್ಯ: ಕಂದಾಯ ಇಲಾಖೆಯಲ್ಲಿ ನೌಕರರು ಒಕ್ಕೊರಲನಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದವರು ಏರ್ಪಡಿಸಿದ್ದ 2026 ರ ನೂತನ ಹೊಸ ವರ್ಷದ ಶುಭಾಶಯ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಯಲ್ಲಿ ಹೊಣೆಗಾರಿಕೆ ಹೆಚ್ಚು ಇರುತ್ತದೆ. ಜನಸಾಮಾನ್ಯರನ್ನು ಮುಟ್ಟುವ ಏಕೈಕ ಇಲಾಖೆಯಾಗಿದ್ದು ಇಂತಹ ಇಲಾಖೆಯಲ್ಲಿ ಕೆಲಸ ಮಾಡಲು ಸಿಕ್ಕಿರುವ ಅವಕಾಶ ಪುಣ್ಯ ಎಂದು ಹೇಳಿದರು.

ಮಂಡ್ಯ ಜಿಲ್ಲೆ ಎಲ್ಲದರಲ್ಲೂ ಮೊದಲು ಇರಬೇಕು ಅದರ ಮೂಲಕ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲವಾಗಬೇಕು ಆ ನಿಟ್ಟಿನಲ್ಲಿ ಕಂದಾಯ ಇಲಾಖೆ ಕೆಲಸ ಮಾಡಬೇಕು ಎಂದು ಹೇಳಿದರು.

ಹೊಸ ವರ್ಷದಲ್ಲಿ ಹೊಸ ದಿನಗಳು ಬರುತ್ತವೆ. ನಾವುಗಳು ಕೂಡ ಅದಕ್ಕೆ ಸರಿಯಾಗಿ ಹೊಂದಿಕೊಂಡು ಹೋಗಬೇಕು ಸಮಯ ಯಾರನ್ನು ಕಾಯುವುದಿಲ್ಲ. ಬದುಕು ಹಾಗೂ ಸಮಯ ನಿಂತ ನೀರಾಗಲು ಸಾಧ್ಯವಿಲ್ಲ. ಸದಾ ಹರಿಯುವ ನೀರಾಗಿದ್ದರೆ ಮಾತ್ರ ಪರಿಶುದ್ಧವಾಗಿರುತ್ತದೆ ಎಂದು ತಿಳಿಸಿದರು.

ಪ್ರತಿಯೊಂದರಲ್ಲೂ ಕೂಡ ಜೀವನೋತ್ಸಹ ಇಲ್ಲ ಎಂದರೆ ಹೊಸತನ ಹಾಗೂ ಬದುಕಿನಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಹಾಗೂ ತಹಸಿಲ್ದಾರ್ ಅವರಿಗೂ ಹೊಸ ವರ್ಷದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಡಿ.ತಮ್ಮಣ್ಣ ಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ರಾಜ್ಯ ಪರಿಷತ್ ಸದಸ್ಯರಾದ ಮಂಜುನಾಥ್, ಜಯಕುಮಾರ್, ತಾಲೂಕು ಕಂದಾಯ ಇಲಾಖೆಯ ಚಂದ್ರಕಲಾ, ವೆಂಕಟೇಶ್, ಲಿಂಗಸ್ವಾಮಿ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದರು.

Related posts

ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಿ

ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ದಿನ: ಆ‌ರ್. ಅಶೋಕ

17 ಮಂದಿ ಸಾವು ; 18 ಮಂದಿ ಗಾಯ

Leave a Comment