NEWS

ಶಾಲಾ ಕಾಲೇಜುಗಳಲ್ಲೂ ತಂಬಾಕು ನಿಯಂತ್ರಣ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ : ಡಾ. ಕುಮಾರ

ಪಾಲನೆ ನ್ಯೂಸ್

    ಮಂಡ್ಯ: ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿವಿಧ ಶಾಲಾ ಮಕ್ಕಳಿಂದ ಪತ್ರ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿದ್ದು ಸುಮಾರು 75 ಸಾವಿರ ಪತ್ರಗಳನ್ನು ಬರೆದು ತಮ್ಮ ಕುಟುಂಬದವರಿಗೆ ಬರೆದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಗಿದ್ದು ಕಾರ್ಯಕ್ರಮವು ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ತಂಬಾಕು ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯಾದ ಡಾ. ಕುಮಾರ ರವರು ತಿಳಿಸಿದರು.

    ಇಂದು ಜಿಲ್ಲಾಡಳಿತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಹಂತದಲ್ಲಿ ತಂಬಾಕು ಮುಕ್ತ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಿದರು.

    ತಂಬಾಕು ಮಾರಾಟ ಮಾಡುವ ಮಳಿಗೆ (ಅಂಗಡಿ ) ಗಳು ಶಾಲಾ ಕಾಲೇಜು, ಆಸ್ಪತ್ರೆ ಗಳಿಂದ 100 ಮೀಟರ್ ಅಂತರ ಒಳಗೆ ತಂಬಾಕು ಮಾರಾಟ ಮಾಡುವ ಮಳಿಗೆಗಳನ್ನು ರೈಡ್ ಮಾಡಿ ಲೈಸೆನ್ಸ್ ರದ್ದು ಗೊಳಿಸುವಂತೆ ಸೂಚಿಸಿದರು.

    ಚಿತ್ರಮಂದಿರಗಳಲ್ಲಿ ತಂಬಾಕು ಸೇವನೆ ಮಾಡುತ್ತಿರುವ ಭಾವಚಿತ್ರ ಮತ್ತು ಪೋಸ್ಟರ್ ಗಳನ್ನು ಅಳವಡಿಸಬಾರದು ಹಾಗೂ ಉಲ್ಲಂಘನೆ ಮಾಡುವವರಿಗೆ ಕಾನೂನು ಕ್ರಮ ವಹಿಸಬೇಕು ಎಂದು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಜಾರಿ ಅಧಿಕಾರಿ ಡಾ. ಬೆಟ್ಟಸ್ವಾಮಿ, ಐ. ಎನ್. ಎ ಅಧ್ಯಕ್ಷರು ಡಾ. ಮರಿಗೌಡ, ನಗರಸಭೆಯ ಪರಿಸರ ಅಭಿಯಂತರರು ರುದ್ರೇಗೌಡ, ಜಿಲ್ಲಾ ಸಲಹೆಗರಾರು ತಿಮ್ಮಯ ರವರು ಉಪಸ್ಥಿತರಿದ್ದರು.

    ✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
    https://chat.whatsapp.com/H1gUYgrzvnQGZAhIQSGMHn

    Related posts

    ನ್ಯಾಯಮೂರ್ತಿಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಅರ್ಜಿ ಪರಿಶೀಲನೆ:

    ಜಿಲ್ಲಾಧಿಕಾರಿಗಳಿಂದ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ಮತ್ತು ಪರಿಶೀಲನೆ

    ಹೊಸ ವರ್ಷ ವ್ಯಸನ ಮುಕ್ತ ರಾಜ್ಯವಾಗಲಿ : ಡಾ. ಚಂದ್ರಶೇಖರ್ ಆಶಯ

    Leave a Comment