VIEWS

‘ಗಾದಿ’  ಸಿಗದ  ‘ಯುಗಾದಿ’

ಪಾಲನೆ ವ್ಯೂಸ್

ಯು (ಗೆ )ಇಲ್ಲವೇ ಇಲ್ಲ ಗಾದಿ. ಐದು ವರ್ಷವೂ ನನ್ನದೇ ಅವಧಿ. ಗಾದಿಗಾಗಿ ಹಲವು ಬಾರಿ ಡೆಲ್ಲಿ ನಾಯಕರ ಭೇಟಿ, ಒತ್ತಾಯ. ಒಂದೊಂದು ಬಾರಿಯು ಒಂದೊಂದು ಸಬೂಬು, ಮುಂದೆ ನೋಡೋಣ, ಕಾಲ ಕೂಡಿ ಬರಲಿ, ತಾಳ್ಮೆಯಿಂದಿರಿ ಎಂಬ ಕಿವಿಮಾತು.

ಅಷ್ಟರಲ್ಲಾಗಲೇ ಕೆಲ ರಾಜ್ಯಗಳಲ್ಲಿ ಚುನಾವಣೆ, ಚುನಾವಣೆ ಉಸ್ತುವಾರಿ ವಹಿಸಿ, ಪಕ್ಷ ಗೆಲ್ಲಿಸಿ, ನಂತರ ಫಲಿತಾಂಶ ಗಮನಿಸಿ ನೀಡೋಣ ಗಾದಿ ಎಂಬ ಹುಸಿ ಭರವಸೆ. ನಮ್ಮಯ್ಯ ಗೆ ಐದು ವರ್ಷವೂ ಗಾದಿ ಎನ್ನುತ್ತಿದ್ದಾರೆ ಕೆಲವರು. ಉಳಿದವದಿಗೆ ನಮ್ಮಣ್ಣಗೆ ಸಿಕ್ಕೇ ಸಿಕ್ಕುತ್ತೆ ಗಾದಿ ಅಂತಿದ್ದಾರೆ ಉಳಿದವರು.ಇದೇ ವಿಷಯವಾಗಿ ಉಳಿದವರಿಗೆ ನೋಟಿಸ್ ಕೆಲವರಿಗಂತೂ ನೋ ಕಾಮೆಂಟ್ಸ್.

ಇದರ ನಡು ನಡುವೆ ಸಂಪುಟ ಪುನಾರಚನೆ ಪುಕಾರು. ಮೊದಲ ಬಾರಿ ಶಾಸಕರಾದ ನಮಗೆ ಹೆಚ್ಚು ಅವಕಾಶ ನೀಡಲು ಅಹವಾಲು. ಮೂರ್ನಾಲ್ಕು- ಐದಾರು ಬಾರಿ ಶಾಸಕರಾದ ನಮಗೂ ಮೊದಲ ಆದ್ಯತೆ ನೀಡಲು ದುಂಬಾಲು.

ಗಾದಿ ಹಂಚಿಕೆಯ ಬಗ್ಗೆ ಯಾರಿಂದಲೂ ಇಲ್ಲ ಸ್ಪಷ್ಟತೆ. ಹೈಕಮಾಂಡ್ ನಿಂದ ಸಿಗುತ್ತಲೇ ಇಲ್ಲ ಗಾದಿ ನೀಡುವ ಬಗ್ಗೆ ನಿಖರತೆ. ಗಾದಿ ಸಿಗದ ಈ ಯುಗಾದಿ ಯಲ್ಲಿಯೂ  ಬಿಡಲಾದೀತೆ ತಿನ್ನಲು ಹೋಳಿಗೆ. ಬೇಕಾದರೆ ಹಿಡಿಯಿರಿ ಮುಂದಿನ ಯುಗಾದಿಯೊಳಗಾದರೂ ನೀಡಲೇಬೇಕು ಆ ‘ಗಾದಿ’ ಎಂಬ ಒತ್ತಾಯದ ಜೋಳಿಗೆ.

ಜಿ. ಧನಂಜಯ ದರಸಗುಪ್ಪೆ, ಮಂಡ್ಯ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಲಿ

ದ್ವೇಷ ಮಾಡುವುದು ಜೀವನವೇ ಅಲ್ಲ

ಸ್ವರ್ಗದಲ್ಲಿ ಹುಟ್ಟಿದಾಕೆ…

Leave a Comment