NEWS

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಲು ಸೂಚನೆ

ಸಕ್ಕರೆ ಕಾರ್ಖಾನೆ ಯಾವುದೇ ಸಬೂಬು ಹೇಳದೆ ರೈತರ ಹಣ ಸಂದಾಯ ಮಾಡಬೇಕು

ಪಾಲನೆ ನ್ಯೂಸ್

ಮಂಡ್ಯ: ಡಾ ಕುಮಾರ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೆರಡು ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ ರೂ 100 ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಹಣ ಸಂದಾಯ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಬ್ಬು ಸರಬರಾಜು ಹೆಚ್ಚುವರಿ ಕಬ್ಬಿನ ಬೆಲೆ ಕುರಿತು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿದರು.

2025-26ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಎಫ್‌ಆರ್‌ಪಿ (FRP) ಮೇಲೆ ಪ್ರತಿ ಟನ್‌ಗೆ ₹100 ಹೆಚ್ಚುವರಿ ಹಣವನ್ನು ಜಮಾ ಮಾಡಲು ತೀರ್ಮಾನಿಸಲಾಗಿದೆ.

ಇದರಲ್ಲಿ ರಾಜ್ಯ ಸರ್ಕಾರವು ₹50 ಆರ್ಥಿಕ ನೆರವು ಮತ್ತು ಕಾರ್ಖಾನೆಗಳು ಹೆಚ್ಚುವರಿ ₹50 ಸೇರಿಸಿ, ಒಟ್ಟು ₹100 ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಈಗಾಗಲೇ ಸರ್ಕಾರದ ಹಂತದಲ್ಲಿ ಈಗಾಗಲೇ ಹಣವನ್ನು ಬಿಡುಗಡೆಯಾಗಿದ್ದು ಕಾರ್ಖಾನೆಯವರು ಯಾವುದೇ ಸಬೂಬು ಹೇಳದೇ ರೈತರ ಹಣ ಸಂದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಸರ್ಕಾರದ ಆದೇಶವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಪಾಲಿಸಬೇಕು. ಮಂಡ್ಯ ಸಕ್ಕರೆ ಕಾರ್ಖಾನೆಯ ಮಾಲೀಕರು ಸರ್ಕಾರ ನೀಡಿರುವ ರೂ 50ಗಳನ್ನು ಸಹಾಯ ಧನವನ್ನು ಪಡೆದು ಕಾರ್ಖಾನೆಯ ಹೆಚ್ಚುವರಿ ಹಣ 50 ಸೇರಿಸಿ ಒಟ್ಟು ರೂ 100 ರೈತರ ಖಾತೆಗೆ ಸಂದಾಯ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರತೀಕ್ ಹೆಗ್ಡೆ ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರು ಉಪಸ್ಥಿತರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತೇವೆ: ಟ್ರಂಪ್ ಬೆದರಿಕೆ

ನದಿಗಳ ಜೋಡಣೆ: ಲಾಭ, ನಷ್ಟಗಳು

ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ

Leave a Comment