ಪಾಲನೆ ನ್ಯೂಸ್
ಬೆಂಗಳೂರು: ಬಹುನಿರೀಕ್ಷಿತ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗಿನ ಮೊದಲ 20 ಪಂದ್ಯಗಳ ವೇಳಾಪಟ್ಟಿ ಯನ್ನು ಘೋಷಿಸಲಾಗಿದೆ. ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಚುನಾವಣಾ ಆಯೋಗದಿಂದ ಮತದಾನದ ದಿನಾಂಕ ಬಿಡುಗಡೆಯಾದ ಬಳಿಕವಷ್ಟೇ ಉಳಿದ ಪಂದ್ಯಗಳ TATA IPL 2026 ವೇಳಾಪಟ್ಟಿಯನ್ನು ಬಿಸಿಸಿಐ ಘೋಷಣೆ ಮಾಡಲಿದೆ. 10 ತಾಣಗಳಲ್ಲಿ ಮೊದಲ 20 ಪಂದ್ಯಗಳು ಆಯೋಜನೆಯಾಗಲಿದೆ. ಬೆಂಗಳೂರು, ಮುಂಬೈ, ಗುವಾಹಟಿ, ನ್ಯೂ ಚಂಡೀಗಡ, ಲಖನೌ, ಕೋಲ್ಕತ್ತ, ಚೆನ್ನೈ, ಹೊಸದಿಲ್ಲಿ, ಅಹಮದಾಬಾದ್ ಮತ್ತು ಹೈದರಾಬಾದ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
ಈ ಅವಧಿಯಲ್ಲಿ ನಾಲ್ಕು ಡಬಲ್ ಹೆಡ್ಡರ್ ಪಂದ್ಯಗಳು (ದಿನಕ್ಕೆ 2 ಪಂದ್ಯ) ನಿಗದಿಯಾಗಿವೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಿಗದಿಯಾಗದಿರುವ ಪಂದ್ಯಗಳು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಅನುಮೋದನೆಗೆ ಒಳಪಟ್ಟಿರುತ್ತವೆ ಎಂದೂ ಉಲ್ಲೇಖಿಸಲಾಗಿದೆ. ಮೊದಲ ಹಂತದಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಆಡಲಿದೆ.

ಮಾರ್ಚ್ 28ರಂದು ಬೆಂಗಳೂರಿನಲ್ಲಿ ಹೈದರಾಬಾದ್ ವಿರುದ್ಧ, ಏಪ್ರಿಲ್ 5ರಂದು ಮೊದಲ ಹಂತದ ವೇಳಾಪಟ್ಟಿ ಮಾರ್ಚ್ 28: ಆರ್ ಸಿಬಿ – ಎಸ್ ಆರ್ ಹೆಚ್, ಬೆಂಗಳೂರು. ಮಾರ್ಚ್ 29, ಮುಂಬೈ -ಕೊಲ್ಕತ್ತಾ ನೈಟ್ ರೈಡಸ್, ವಾಂಖೇಡೆ. ಮಾರ್ಚ್ 30: ರಾಜಸ್ಥಾನ್ -ಚೆನ್ನೈ ಗುವಾಹಟಿ. ಮಾರ್ಚ್ 31: ಪಂಜಾಬ್ ಕಿಂಗ್ಸ್ -ಗುಜರಾತ್, ನ್ಯೂ ಚಂಡೀಗಡ, ಏಪ್ರಿಲ್ 1: ಸೂಪರ್ ಜೈಂಟ್ಸ್ – ಆರ್ ಸಿಬಿ, ಲಕ್ಟೋ. ಏಪ್ರಿಲ್ 2: ಕೊಲ್ಕತ್ತಾ -ಎಸ್‌ಆರ್ ಹೆಚ್, ಕೊಲ್ಕತ್ತಾ. ಏಪ್ರಿಲ್ 3: ಚೆನ್ನೈ – ಪಂಜಾಬ್ ಕಿಂಗ್ಸ್ : ಚೆನ್ನೈ, ಏಪ್ರಿಲ್ 4: ಡೆಲ್ಲಿ ಕ್ಯಾಪಿಟಲ್ಸ್ – ಮುಂಬೈ ಇಂಡಿಯನ್ಸ್ : ಡೆಲ್ಲಿ ಏಪ್ರಿಲ್ 4: ಗುಜರಾತ್ -ರಾಜಸ್ಥಾನ್, ಅಹಮದಾಬಾದ್.
ಏಪ್ರಿಲ್ 5: ಎಸ್‌ಆರ್ ಹೆಚ್,- ಲಕ್ಷ್ಮೀ, ಹೈದರಾಬಾದ್ ಏಪ್ರಿಲ್ 5: ಆರ್ ಸಿಬಿ -ಚೆನ್ನೈ, ಬೆಂಗಳೂರು. ಏಪ್ರಿಲ್ 6: ಕೊಲ್ಕತ್ತಾ- ಪಂಜಾಬ್ ಕಿಂಗ್ಸ್, ಕೊಲ್ಲತ್ತಾ. ಏಪ್ರಿಲ್ 7: ರಾಜಸ್ಥಾನ್- ಮುಂಬೈ: ಗುವಾಹಟಿ. ಏಪ್ರಿಲ್ 8: ಡೆಲ್ಲಿ – ಗುಜರಾತ್, ದೆಹಲಿ. ಏಪ್ರಿಲ್ 9: ಕೊಲ್ಕತ್ತಾ -ಲಕ್ಷ್ಮೀ : ಕೊಲ್ಕತ್ತಾ. ಏಪ್ರಿಲ್ 10: ರಾಜಸ್ಥಾನ್ ಆರ್‌ಸಿಬಿ: ಗುವಾಹಟಿ. ಏಪ್ರಿಲ್ 11: ಪಂಜಾಬ್- ಎಸ್‌ಆರ್‌ಹೆಚ್, ನ್ಯೂ ಚಂಡೀಗಡ ಏಪ್ರಿಲ್ 11: ಚೆನ್ನೈ – ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ. ಏಪ್ರಿಲ್ 12: ಲಕ್ಷ್ಮೀ- ಗುಜರಾತ್: ಲಕ್ಟೋ ಏಪ್ರಿಲ್ 12: ಮುಂಬೈ- ಆರ್‌ಸಿಬಿ ಮುಂಬೈ. ಬೆಂಗಳೂರಿನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ ಏಪ್ರಿಲ್ 10ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಏಪ್ರಿಲ್ 12ರಂದು ಮುಂಬೈಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
