NEWS

ಯುವಜನತೆ ಕ್ರೀಡಾ ಮನೋಭಾವ ಮತ್ತು ಆಸಕ್ತಿಯನ್ನು ಬೆಳಿಸಿಕೊಳ್ಳಿ – ಪ್ರೊ.ವಿಷ್ಣು ಶಿಂಧೆ

ಪಾಲನೆ ನ್ಯೂಸ್

ಮಂಡ್ಯ :‌‌ ಮಂಡ್ಯ ಜಿಲ್ಲೆ ಕ್ರೀಡೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ನೆಲವಾಗಿದೆ.ಭಾರತ ಕ್ರಿಕೆಟ್ ತಂಡ 2026 ರ ಟಿ 20 ವಿಶ್ವ ಕಪ್ ಗೆದ್ದು ಯುವಜನತೆಯಲ್ಲಿ ಕ್ರೀಡಾ ಉತ್ಸಾಹವನ್ನು ಉಂಟುಮಾಡಿದೆ. ಜಿಲ್ಲೆಯ ಯುವ ಜನತೆಯೂ ಕ್ರೀಡಾ ಮನೋಭಾವ ಮತ್ತು ಆಸಕ್ತಿಯನ್ನು ಬೆಳಿಸಿಕೊಳ್ಳಬೇಕು ಎಂದು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾದ ಪ್ರೊ.ವಿಷ್ಣು ಶಿಂಧೆ ರವರು ಹೇಳಿದರು.

ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ ಮೈ ಭಾರತ್ (ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ)MY BHARTH MANDYA ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎನ್.ಎಸ್. ಎಸ್. ಘಟಕಗಳು ಮಂಡ್ಯ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ಎಲ್ಲಾ ಯುವಕ ಯುವತಿ ಮತ್ತು ಮಹಿಳಾ ಮಂಡಳಿಗಳ ಇವರ ಸಹಯೋಗದೊಂದಿಗೆ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ -2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ಹೆಮ್ಮೆ ವಿಷಯ. ಮಹಿಳೆಯರು ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಮಹಿಳೆಯರ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತದೆ.
ಕ್ರೀಡೆಯನ್ನು ಮೈಗುಡಿಸಿಕೊಳ್ಳುವ ಮೂಲಕ ಉದ್ಯೋಗ ಅವಕಾಶಗಳನ್ನು ಹೆಚ್ಚು ಹೆಚ್ಚು ಪಡೆಯಬಹುದು ಎಂದು ಹೇಳಿದರು.

ಯುವಕ ಯುವತಿಯರು ಕ್ರೀಡಾ ಆಸಕ್ತಿ ಬೆಳಸಿಕೊಳ್ಳಬೇಕು ಮತ್ತು ಕ್ರೀಡೆಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನಸ್ಸು ವೃದ್ಧಿಯಾಗುತ್ತದೆ ಹಾಗೂ ಅರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎಂ.ಬಿ ಪ್ರಮೀಳಾ ಮಾತನಾಡಿ ರಾಷ್ಟ್ರೀಯ ಕ್ರೀಡೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು ಯುವಜನತೆ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು.ಪ್ರತಿಯೊಬ್ಬರೂ ಕ್ರೀಡಾ ಆಸಕ್ತಿಯನ್ನು ಬೆಳಿಸಿಕೊಳ್ಳಬೇಕು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು.ನಮ್ಮಲ್ಲಿನ ಸಾಮರ್ಥ್ಯ ಮತ್ತು ಶಕ್ತಿಯನ್ನು ಪ್ರತಿ ಬಿಂಬಿಸುವ ಕ್ರೀಡಾ ಆಸಕ್ತಿಯನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಶೃತಿ ಹಾಗೂ ದೈಹಿಕ ಶಿಕ್ಷಕಿ ಉಶಾರಾಣಿ ಅವರು ಉಪಸ್ಥಿತರಿದ್ದರು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕಂದಾಯ ಇಲಾಖೆಯಲ್ಲಿ ನೌಕರರು ಒಕ್ಕೊರಲನಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು: ಡಾ.ಕುಮಾರ

ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯ ಕುರಿತು ಜಿಲ್ಲೆಯ ಯುವ ಜನತೆಗೆ ಅರಿವು ಮೂಡಿಸಿ: ಡಾ.ಕುಮಾರ

ಡಿಜಿಟಲ್ ಮಾದರಿಯಲ್ಲಿ 2027ರ ಜನಗಣತಿ

Leave a Comment