NEWS

ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹ

ಪಾಲನೆ ನ್ಯೂಸ್

ಮಂಡ್ಯ ಭಾರತೀನಗರ : ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾರತೀನಗರದ ಎಸ್‌ಬಿಐ ಎದುರು ಪ್ರತಿಭಟನೆ ನಡೆಸಿದರು. ಭಾರತೀನಗರದ ಎಸ್‌ಬಿಐ ಶಾಖೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿ ಬ್ಯಾಂಕ್‌ನ ಆಡಳಿತ ವೈಖರಿಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮಣಿಗೆರೆ ರಾಮಚಂದ್ರೇಗೌಡ, ಹಣವನ್ನು ಕಟ್ಟುವ ಮತ್ತು ಪಡೆಯುವ ರಶೀದಿಗಳನ್ನು ಕನ್ನಡದಲ್ಲೇ ಮುದ್ರಿಸಬೇಕು. ನಮ್ಮ ನಾಡಿನ ಕನ್ನಡ ಭಾಷೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಸ್ಟೇಟ್ ಬ್ಯಾಂಕ್ ಆಫ್ಇಂಡಿಯಾ ಹಾಗೂ ಇತರೆ ರಾಷ್ಟಿಕೃತ ಬ್ಯಾಂಕ್‌ಗಳು ಮಾಡುತ್ತಿವೆ. ಕೂಡಲೇ
ಕನ್ನಡದಲ್ಲಿ ರಶೀದಿಗಳನ್ನು ಮುದ್ರಿಸಿ ವ್ಯವಹರಿಸಬೇಕೆಂದು ಆಗ್ರಹಿಸಿದರು. ನಮ್ಮ ಕನ್ನಡ ನಾಡಿನಲ್ಲಿರುವಂತಹ ಬ್ಯಾಂಕ್‌ಗಳಲ್ಲಿ ಕನ್ನಡಿಗರನ್ನೇ ನೇಮಿಸಬೇಕು. ಕನ್ನಡದ ನೀರು ಮತ್ತು ಗಾಳಿಯನ್ನು ಸೇವಿಸುತ್ತಿರುವ ಪ್ರತಿಯೊಬ್ಬರು ಕನ್ನಡದಲ್ಲೇ ಮಾತನಾಡಬೇಕೆಂದು ಆಗ್ರಹಿಸಿದರು.


ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳೇ ಇಲ್ಲದಿರುವುದರಿಂದ ನಮ್ಮ ಭಾಗದ ರೈತರು, ಗ್ರಾಹಕರು, ಜನ ಸಾಮಾನ್ಯರು ಬ್ಯಾಂಕ್‌ಗೆ
ಹೋಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಕನ್ನಡಿಗರಿಗೆ ಮತ್ತು ಕನ್ನಡ ನುಡಿಗೆ ಅಪಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಸ್‌ಬಿಐ ಮ್ಯಾನೇಜರ್ಎಸ್.ದಯಾಮಣಿ ಅವರಿಗೆ ಮನವಿ ಪತ್ರಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿ ಎಸ್‌ಬಿಐ ಮ್ಯಾನೇಜರ್ ಎಸ್.ದಯಾಮಣಿ ಮಾತನಾಡಿ, ಇಂಗ್ಲೀಷ್ ಮತ್ತು ಹಿಂದಿಯಲ್ಲಿರುವ ರಶೀದಿಗಳನ್ನು ಕನ್ನಡಕ್ಕೆ ಬದಲಿಸುವ ಶಕ್ತಿ ನನ್ನಲ್ಲಿ ಇಲ್ಲ. ನಾನು ಕೂಡ
ಇಲ್ಲಿ ಒಬ್ಬ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ಸಂಬಂಧವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಬಗೆ ಹರಿಸಲು ಪ್ರಯತ್ನಿಸುತ್ತೇನೆಂದು ತಿಳಿಸಿದರು.


ಮ್ಯಾನೇಜರ್ ಅವರ ಭರವಸೆ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯಲ್ಲಿ ಕ.ರ.ವೇ ಕಾರ್ಯಕರ್ತರಾದ ಮದ್ದೂರು ಗೀತ, ಮಹದೇವು, ಉಮೇಶ್, ಹೊನ್ನಾಯಕನ ಹಳ್ಳಿ ಗಣೇಶ್, ಸಂತೋಷ್, ಚಿಕ್ಕಸ್ವಾಮಿ, ಮಾದರಹಳ್ಳಿ ಉಮೇಶ್, ತೊರೆಚಾಕನ ಹಳ್ಳಿ ಮಹೇಶ್, ಕಳ್ಳಿಮೆಳೆದೊಡ್ಡಿ ನಾಗೇಶ್, ಕಡಿಲುವಾಗಿಲು ಶಿವಮಾದು, ಅರೆಚಾಕನಹಳ್ಳಿ ಶಿವರಾಜು, ರವಿ, ಮಧು, ರಾಮಣ್ಣ ಸೇರಿದಂತೆ ಹಲವರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕೂಡಲೇ ಶೃಂಗೇರಿ ಫಲಿತಾಂಶ ಪ್ರಕಟಿಸಿ ಎಂದ ಆರ್‌.ಅಶೋಕ

ಮೇ ಮಾಹೆಯಲ್ಲಿ ಬರುವ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ : ಬಿ. ಸಿ. ಶಿವಾನಂದಮೂರ್ತಿ

ಡೊನಾಲ್ಡ್ ಟ್ರಂಪ್ ಅಪಘಾತದಿಂದ ಪಾರು

Leave a Comment