NEWS

ಮೂಲ ಸೌಕರ್ಯ ಕಲ್ಪಿಸಮೂಲ ಸೌಕರ್ಯ ಕಲ್ಪಿಸ‌ಲು 500 ಕೋಟಿ ರೂ. ಪ್ರಸ್ತಾವನೆ: ಜಿ.ಟಿ.ದೇವೇಗೌಡ

ಪಾಲನೆ ನ್ಯೂಸ್

ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಅಂದಾಜು 6 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿರುವ ಸಮಸ್ಯೆಗಳು ಬೇರೆ ಕ್ಷೇತ್ರಗಳಲ್ಲಿ ಕಂಡು ಬರಲ್ಲ. ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿವೆ. ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ಕುಡಿಯುವ ನೀರು, ರಸ್ತೆ, ಒಳಚರಂಡಿ ಮೊದಲಾದ ಸಮಸ್ಯೆಗಳನ್ನು ಪರಿಹರಿಸದೆ ಹಾಗೆಯೇ ಬಿಟ್ಟು ಹೋಗಿದ್ದಾರೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದರೆ ಅಂದಾಜು 500 ಕೋಟಿ ರೂಪಾಯಿ ಬೇಕಾಗುತ್ತದೆ ಎಂದರು.

ಯುಜಿಡಿ ಸಮಸ್ಯೆಗಳನ್ನು ಪರಿಹರಿಸಲು ಶಾಶ್ವತವಾದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಅನುಮೋದನೆ ಪಡೆಯಲು ಶಕ್ತಿ ಮೀರಿ ಶ್ರಮಿಸುವೆ. ರಾಮಕೃಷ್ಣನಗರ ಸೇರಿದಂತೆ ನನ್ನ ವ್ಯಾಪ್ತಿಯ ಭಾಗದ ಐದು ವಾರ್ಡ್‌ಗಳಿಗೆ 27 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಈತನಕ ಅನುದಾನ ಬಿಡುಗಡೆ ಆಗಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದರು.

ಹಳೆಯ ಉಂಡುವಾಡಿ ಯೋಜನೆಯು ವರ್ಷಾಂತ್ಯದಲ್ಲಿ ಮುಗಿಯಲಿದ್ದು, ದಿನದ 24 ಗಂಟೆಗಳ ಕಾಲ ನೀರು ಕೊಡಲಾಗುವುದು. 32 ಟ್ಯಾಂಕ್‌ಗಳ ನಿರ್ಮಾಣ ಮಾಡಲಿದ್ದು, ಈಗ 27 ಮುಗಿದಿದೆ. ಕಬಿನಿ ನದಿ ಮೂಲದ ಯೋಜನೆಯಿಂದ 60 ಎಂಎಲ್‌ ಡಿ ನೀರು ಬರುತ್ತಿದ್ದು, ಮತ್ತೆ 60 ಎಂಎಲ್‌ಡಿ ನೀರುಹರಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಅಧಿಕಾರಿಗಳಲ್ಲಿ ಸಮನ್ವಯತೆ: ಹಲವಾರು ವರ್ಷಗಳಿಂದ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಯಿಸಿ ಮನವರಿಕೆ ಮಾಡಿಸಿಕೊಡುವ ಕೆಲಸ ಮಾಡಲಾಗಿದೆ. ಜಿಲ್ಲಾಧಿಕಾರಿಗಳನ್ನೇ ಖುದ್ದು ಆಹ್ವಾನಿಸಿ ಜನರ ಸಮಸ್ಯೆ ಅರಿಯುವಂತೆ ಮಾಡಲಾಗಿದೆ. ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ನಗರಪಾಲಿಕೆ, ಲೋಕೋಪಯೋಗಿ, ಸೆಸ್ಕ್, ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರೆ ಅನೇಕ ಸಮಸ್ಯೆ ಪರಿಹರಿಸಬಹುದು. ಜನರಿಂದ ನಿತ್ಯ ನೂರಾರು ಸಮಸ್ಯೆಗಳು ಕೇಳಿ ಬರುತ್ತಿವೆ. ರಾಮಕೃಷ್ಣನಗರ ಬಡಾವಣೆಯ ಜನರ ಕಷ್ಟಗಳನ್ನು ನಾನೇ ನೋಡಿದ್ದೇನೆ. ಲಿಂಗಾಬುದಿ ಕೆರೆಗೆ ಯುಜಿಡಿ ನೀರು ಸೇರದಂತೆ ಶೀಘ್ರ ಕ್ರಮಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಗಮನಹರಿಸಲಿದ್ದಾರೆ ಎಂದು ನುಡಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನಗರಾಭಿವೃದ್ಧಿ ಇಲಾಖೆ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆ

ಕಾಡ್ತಿಚ್ಚು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ : ಖಂಡ್ರೆ

ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು

Leave a Comment