NEWS

ರಸ್ತೆಗಳ ಮೂಲೆಗಳಲ್ಲಿ ಕಸ ಹಾಕುವವರಿಗೆ ದಂಡ

ಪಾಲನೆ ನ್ಯೂಸ್

ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳಲಾಗುತ್ತಿದ್ದು, ವಿವಿಧ ರಸ್ತೆಗಳ ರಸ್ತೆಬದಿ ಕಸ ಹಾಕಿದರೆ ದಂಡ ಹಾಕಲಾಗುತ್ತಿದೆ. ಈವರೆಗೆ ಒಟ್ಟು ಭಾರಿ *3.6 ದಂಡ ವಸೂಲಿ ನಗರದಲ್ಲಿ ಕಸ ಎಸೆಯುವವರ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ವರ್ಷ 82 ಸಾವಿರ ಪ್ರಕರಣಗಳಲ್ಲಿ ಒಟ್ಟು 3.6 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ದಂಡ ಹಾಕುವ ಜತೆಗೆ ಸ್ವಚ್ಛತೆಯ ಪಾಠವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಸೇರಿ ವಿವಿಧ ಪ್ರಕರಣಕ್ಕೂ ದಂಡ ವಿಧಿಸಲಾಗುತ್ತಿದೆ. ಮೂಲೆ ಮೂಲೆಯಲ್ಲಿ ಸಿಸಿ ಕ್ಯಾಮರಾ ಹಾಕಿರುವ ಕಾರಣಕ್ಕೆ ಯಾರು ಕಸತಂದು ರಸ್ತೆಬದಿಯಲ್ಲಿ ಬಿಸಾಕು ತ್ತಾರೆ ಎಂಬುದು ಅಧಿಕಾರಿಗಳಿಗೆ ಸುಲಭವಾಗಿ ತಿಳಿಯುತ್ತಿದೆ. ಸಾರ್ವಜನಿಕರು ಸಹ ಸಹಾಯವಾಣಿ ಮೂಲಕ ಕರೆ ಮಾಡಿ ಜುಲ್ಮಾನೆ ಎಷ್ಟು? ರಸ್ತೆ ಬದಿ ಕಸ ಹಾಕಿ ಹೋಗುವವರಿಗೆ ಇದೀಗ 2 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ.

ಈ ದುಬಾರಿ ದಂಡದಿಂದಾಗಿ ಸಾಕಷ್ಟು ಜನರು ಎಚ್ಚೆತ್ತು ಕೊಂಡಿದ್ದಾರೆ. ಇನ್ನು ಮೂತ್ರ ವಿಸರ್ಜನೆ ಕುರಿತು 308 ಪ್ರಕರಣ, ರಸ್ತೆ ಬದಿ ಉಗಿದ 183 ಪ್ರಕರಣಳಿಂದ ಒಟ್ಟಾರೆ 45,100 ರೂ. ದಂಡ ವಸೂಲಿ ಮಾಡಲಾಗಿದೆ. ದೂರು ನೀಡುತ್ತಿದ್ದಾರೆ. 20250ರ ಆಗಸ್ಟ್‌ ನಲ್ಲಿ 6,168 ಪ್ರಕರಣಗಳಲ್ಲಿ 25.1 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ 21,257 ಪ್ರಕರಣ ದಾಖಲಾಗಿದ್ದು, 98 ಲಕ್ಷ ರೂ. ದಂಡ ವಸೂಲಿಯಾಗಿದೆ. ಅಕ್ಟೋಬರ್ ನಲ್ಲಿ 12,625 ದೂರು ಬಂದಿದ್ದು, 56 ಲಕ್ಷ ರೂ. ದಂಡ ಹಾಕಲಾಗಿದೆ. ನವೆಂಬರ್ ನಲ್ಲಿ 14,337 ಜನರ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗಿದ್ದು, 61.8 ಲಕ್ಷ ರೂ. ದಂಡ, ಡಿಸೆಂಬರ್‌ನಲ್ಲಿ 56.5 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

“ಅಕ್ಕನ ಬುತ್ತಿ” ಅಡುಗೆ ತಯಾರಿಕಾ ಕೇಂದ್ರದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ ಪಂ ಸಿಇಒ

ಬೂದನೂರು ಉತ್ಸವ 2026 ರಲ್ಲಿ ಹೆಲಿ ಟೂರಿಸಂ ಆಯೋಜನೆ ಮಾಡುವ ಪ್ರಯುಕ್ತ ಸ್ಥಳ ಪರಿಶೀಲನೆ

ಗೃಹ ಲಕ್ಷ್ಮಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸಿ

Leave a Comment