NEWS

ಮಾರ್ಚ್‌ 01 ಬೆಳಗಿನ ಜಾವ 5ಕ್ಕೆ ಮೆಟ್ರೋ ಸೇವೆ ಆರಂಭ

ಪಾಲನೆ ನ್ಯೂಸ್

ಬೆಂಗಳೂರು: ರಾಜ್ಯಮಟ್ಟದ ಪೊಲೀಸ್ ರನ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ.1 ರಂದು ಮುಂಜಾನೆ 5 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಪೊಲೀಸ್ ರನ್ ಕಾರ್ಯಕ್ರಮಕ್ಕೆ ಸಾರ್ವಜನಿಕರುಸುಗಮವಾಗಿ ಸಂಚರಿಸಿ ಭಾಗವಹಿಸಲು ಅನುಕೂಲವಾಗುವಂತೆ ಬಿಎಂಆರ್ ಸಿಎಲ್‌ ನೇರಳೆ ಮಾರ್ಗದ ವೈಟ್ ಫೀಲ್ಡ್ ಮತ್ತು ಚಲ್ಲಘಟ್ಟ, ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆಸಂಸ್ಥೆ ಹಾಗೂ ಹಳದಿ ಮಾರ್ಗದ ಬೊಮ್ಮಸಂದ್ರ ಹಾಗೂ ಆರ್.ವಿ.ರಸ್ತೆ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್‌ಗಳಿಂದ ಮಾ.1 ರಂದು 7 ಗಂಟೆಗೆ ಬದಲಾಗಿ 5 ಗಂಟೆಗೇ ಪ್ರಾರಂಭವಾಗಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಮಹಿಳೆಯರಿಗೆ ರೂ.2123 ಕೋಟಿ ಅನುದಾನ ಬಿಡುಗಡೆ : ಚಿಕ್ಕಲಿಂಗಯ್ಯ

‌ಲೋಕದ ಸಂಕಟಕ್ಕೆ ಪರಿಹಾರ ನೀಡಿದ ವೈದ್ಯ ಬುದ್ಧ: ಬೂದಾಳ್

ಮಂಡ್ಯ ಪೊಲೀಸ್‌ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಡಿ.ಎಸ್. ಶ್ರೀಕಂಠ

Leave a Comment