NEWS

ದಾಂಪತ್ಯ ಜೀವನಕ್ಕೆ ನಟಿ ರಶ್ಮಿಕಾ ಮಂದಣ್ಣ

ಪಾಲನೆ ನ್ಯೂಸ್

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯಪುರದ ಐಷಾರಾಮಿ ಹೋಟೆಲೊಂದರಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಎರಡು ಪ್ರತ್ಯೇಕ ವಿವಾಹ ಸಮಾ ರಂಭಗಳನ್ನು ಈ ಜೋಡಿ ಆಯೋಜಿಸಿತ್ತು ಎನ್ನ ಲಾಗಿದ್ದು, ತೆಲುಗು ಕುಟುಂಬದ ಸಂಪ್ರದಾಯ ದಂತೆ ಬೆಳಿಗ್ಗೆ ಮಂಗಳ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಅದೇ ರೀತಿ ಸಂಜೆ ಕೊಡಗಿನ ಸಂಪ್ರದಾಯದಂತೆ ರಶ್ಮಿಕಾ ಕುಟುಂಬಸ್ಥರಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.

ವಿಜಯ್ ತೆಲುಗು ಕುಟುಂಬಕ್ಕೆ ಸೇರಿದವರಾಗಿದ್ದು, ರಶ್ಮಿಕಾ ಕೊಡವ ಸಮುದಾಯದ‌ ಹಿನ್ನೆಲೆಯವರಾಗಿರುವುದರಿಂದ ವಿವಾಹ ಸಮಾರಂಭದಲ್ಲಿ ಎರಡೂ ಸಂಪ್ರದಾಯ ಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಲಾ ಗುತ್ತಿದೆ. ಇಬ್ಬರೂ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ಮೇಡ್ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ರೀಲ್ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶ್ರೀ ಕೃಷ್ಣ ದೇವರಾಯ ಜಯಂತಿ ಶುಭಾಶಯಗಳು

ಪರಿಚಯ ಪ್ರಕಾಶನ ‘ಒಡಲು ಮತ್ತು ಸೃಷ್ಟಿ’ ಬಿಡುಗಡೆ ನಾಳೆ

An architect isn’t someone; he is visionary

Leave a Comment