ಪಾಲನೆ ನ್ಯೂಸ್
ಮಂಡ್ಯ.ಫೆ.20 ಸಮ ಸಮಾಜದ ಕನಸು ಬಿತ್ತಿದರು ಸಂತ ಕವಿ ಸರ್ವಜ್ಞ ಅವರು. ಅವರ ಆದರ್ಶಗಳು ಮೌಲ್ಯಗಳನ್ನು ಯುವ ಜನತೆ ಅನುಸರಿಸಬೇಕು. ಸಮಾಜದಲ್ಲಿ ಸಮಾನ ಮನಸ್ಕರು ಹೆಚ್ಚಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಪಿ ಪ್ರಕಾಶ್ ಅವರು ಹೇಳಿದರು.
ಇಂದು ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಎಲ್ ಸಂದೇಶ್ ಅವರು ಮಾತನಾಡಿ ಸಂತ ಕವಿ ಕೇವಲ ಒಂದು ಸಮುದಾಯದ ಅಸ್ಥಿಯಲ್ಲ ಕನ್ನಡದ ಆಸ್ತಿ. ಸರ್ವಜ್ಞ ವಚನಗಳು ಸಮಾಜವನ್ನು ಮಾಡಿತ್ತಿದೆ ಯುವ ಪೀಳಿಗೆ ಸರ್ವಜ್ಞರ ವಚನಗಳನ್ನು ಯುವ ಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಮೈಸೂರು ಕ್ರೇಡಿಟ್ ಐ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ಎಂ .ಪಿ ವರ್ಷ ಅವರು ಸರ್ವಜ್ಞ ಎಂದರೆ ಸರ್ವವನ್ನೂ ತಿಳಿದವನು ಎಂದರ್ಥ ಅವರು ಹುಟ್ಟುತ್ತಲೇ ಎಲ್ಲವನ್ನೂ ತಿಳಿದವರಲ್ಲ. ಪ್ರತಿಯೊಬ್ಬರಿಂದ ಒಂದೊಂದು ಕಲಿತು ಸರ್ವಜ್ಞರಾದವರು. ಕಲಿಕೆಗೆ ಮಿತಿ ಇಲ್ಲ ಕಲಿಕೆ ನಿರಂತರ ಪ್ರಕ್ರಿಯೆ ಎಂದು ಸರ್ವಜ್ಞ ಸಾರಿದವರು ಎಂದು ಹೇಳಿದರು.
ನಿಜವಾದ ಮಣ್ಣಿನ ಮಗ ಸರ್ವಜ್ಞ ತಮ್ಮ ತತ್ವ ಆದರ್ಶ ಸಿದ್ಧಾಂತಿಗಳ ಮೂಲಕ ಸಮಾಜವನ್ನು ತಿದ್ದಿದ್ದವರು. ತಮಿಳರು ತಿರುವಳ್ಳುವರ್ ಹಾಗೂ ತೆಲುಗಿನವರು ವೇಮನ ಅವರಿಗೆ ದೇವರ ಸ್ಥಾನ ನೀಡಿದ್ದಾರೆ. 500 ವರ್ಷಗಳ ಹಿಂದೆಯೇ ತಮ್ಮ ವಚನಗಳ ಮೂಲಕ ಇವತ್ತಿನ ಸಮಾಜದ ಕುರಿತು ಬರೆದಿದ್ದಾರೆ. ಅವರು ನಮ್ಮ ಕನ್ನಡಿಗರು ಎಂಬುದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಸರ್ವಜ್ಞ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಅವರು ಆದರ್ಶ ವಚನಗಳು ಎಲ್ಲರಿಗೂ ಸ್ವಂತ. ಸರ್ವಜ್ಞ ಸಮಾಜ ಪ್ರತಿ ಒಬ್ಬ ವ್ಯಕ್ತಿಗೂ ಆದರ್ಶ, 1520 ರಲ್ಲಿ ಹಾವೇರಿ ಜಿಲ್ಲೆಯ ಅಂಬಲುರು ಮಾಸುರಿನಲ್ಲಿ ಸಂತ ಕವಿ ಸರ್ವಜ್ಞ ಜನಿಸಿದರು. 2009 ರಲ್ಲಿ ತಮಿಳುನಾಡಿನಲ್ಲಿ ಸಂತ ಸರ್ವಜ್ಞರ ಪ್ರತಿಮೆಯನ್ನು ಅಧಿನ ಮುಖ್ಯಮಂತ್ರಿಗಳಾದ ಕರುಣಾನಿಧಿ ಹಾಗೂ ಯಡಿಯೂರಪ್ಪ ಅವರು ಸ್ಥಾಪಿಸಿದರು ಎಂದು ತಿಳಿಸಿದರು.

ಸರ್ವಜ್ಞ ಬದುಕಿದ್ದು ಅಲ್ಪ ಕಾಲ ಆದರೂ ಸುಮಾರು 7 ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸರ್ವಜ್ಞ ಎಲ್ಲರನ್ನೂ ಸ್ನೇಹ ಪೂರ್ವಕವಾಗಿ ಕಾಣಬೇಕು ಪರಸ್ಪರ ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕುಂಬಾರರ ಜಾಗೃತಿ ಸಂಘದ ಅಧ್ಯಕ್ಷರಾದ ಕೃಷ್ಣ ಅವರು ಮಾತನಾಡಿ ಜಯಂತಿಗಳಲ್ಲಿ ಜನರ ಆಸಕ್ತಿ ಕಡಿಮೆಯಾಗಿದೆ. ಎಲ್ಲಾ ಸಂಘ ಸಂಸ್ಥೆಗಳ ಮುಖಂಡರುಗಳು ಒಗ್ಗೂಡಿ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸರ್ವಜ್ಞ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಸಮುದಾಯದ ಕುಂದು ಕೊರತೆಗಳನ್ನು ಸರ್ಕಾರಕ್ಕೆ ತಿಳಿಸುವ ಕೆಲಸವಾಗಬೇಕು. ಸರ್ವಜ್ಞ ಅವರು ಕೇವಲ ಒಂದು ಸಮುದಾಯಕ್ಕೆ ಆದರ್ಶ ನೀಡಿಲ್ಲ ಜಗತ್ತಿನ ಜೀವ ಸಂಕುಲಕ್ಕೆ ವಚನಗಳ ಮೂಲಕ ಮೌಲ್ಯ ಆದರ್ಶಗಳನ್ನು ನೀಡಿದ್ದಾರೆ. ಅವರ ಕುರಿತಾಗಿ ನಾವು ತಿಳಿದುಕೊಂಡು ಮುಂದಿನ ಪೀಳಿಗೆಗೂ ತಲುಪಿಸಬೇಕು ಎಂದು ಹೇಳಿದರು.
ನಂತರ ವಿವಿಧ ಸಮುದಾಯಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಿ, ಪೌರಕಾರ್ಮಿಕರಿಗೆ ಸಮವಸ್ತ್ರವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಬಿ. ಎಂ ನಂದೀಶ್, ಜಿಲ್ಲಾ ಕುಂಬಾರರ ಜಾಗೃತಿ ಸಂಘದ ಅಧ್ಯಕ್ಷರು ಕೃಷ್ಣ ಎಂ, ಸಮುದಾಯದ ಪದಾಧಿಕಾರಿಗಳು, ಜೈ ಕರ್ನಾಟಕ ಪರಿಷತಿನ ಅಧ್ಯಕ್ಷ ನಾರಾಯಣ, ಮಂಡ್ಯ ಪಶ್ಚಿಮ ವಲಯದ ಆರಕ್ಷಕ ಉಪನಿರೀಕ್ಷಕ ರಂಗಪ್ಪ ಸಾಲಪೂರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನುಪಮಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
