NEWS

ಮುಖ್ಯಶಿಕ್ಷಕಿ ಅಮಾನತ್ತು; ಮಕ್ಕಳಿಗೆ ಕಳಪೆ ಊಟ

ಪಾಲನೆ ನ್ಯೂಸ್

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಊಟ ನೀಡಿದ್ದ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಮಂಜುಳಾ ಎಂಬವರನ್ನು ಚಾ.ನಗರ ಡಿಡಿಪಿಐ ಎಸ್.ಚಂದ್ರ ಪಾಟೀಲ್‌ ಅಮಾನತ್ತುಗೊಳಿಸಿದ್ದಾರೆ.

ಗ್ರಾಮಸ್ಥರ ದೂರಿನ ಮೇರೆಗೆ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾರವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಅವರು ಕೊಟ್ಟ ಸಮಜಾಯಿಷಿ ಸತ್ಯಕ್ಕೆ ದೂರವಾಗಿದ್ದು ಕಂಡು ಬಂದಿದ್ದರಿಂದ ಅಕ್ಷರ ದಾಸೋಹ ಯೋಜನಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಮೂವರು ಸದಸ್ಯರ ಅಸಮಿತಿಯನ್ನು ರಚಿಸಿ ದಾಸ್ತಾನನ್ನು ತನಿಖೆಗೆ ಒಳಪಡಿಸಿದಾಗ ದವಸ-ಧಾನ್ಯಗಳಲ್ಲಿ ಹುಳು ಮಿಶ್ರಣವಾಗಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಡಿಡಿಪಿಐ ಅವರು ಈ ಕ್ರಮಕೈಗೊಂಡಿದ್ದಾರೆ. ಡಿಡಿಪಿಐ ಕ್ರಮಕ್ಕೆ ಸತ್ತೇಗಾಲದ ಶಾಲಾ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು

2027 ರ ಭಾರತದ ಮೊದಲ ಡಿಜಿಟಲ್ ಜನಗಣತಿ

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

Leave a Comment