NEWS

ಅಖಿಲ ಭಾರತ ಸಾರ್ವತ್ರಿಕ ಮುಷ್ಕರಬೆಂಬಲಿಸಿ ಆಶಾ ಕರ‍್ಯಕರ್ತೆಯರ ಪ್ರತಿಭಟನೆ

ಪಾಲನೆ ನ್ಯೂಸ್

ಮಂಡ್ಯ : ಬೇಡಿಕೆಗಳ ಈಡೇರಿಕೆ ಮತ್ತು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಬೆಂಬಲಿಸಿ ಆಶಾ ಕರ‍್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕರ‍್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.


ರಾಜ್ಯದ ಆಶಾ ಕರ‍್ಯಕರ್ತೆಯರಿಗೆ ೨೦೨೫ ಜನವರಿಯಲ್ಲಿ ತಾವು ಘೋಷಿಸಿದ ರೂ. ೧೦ ಸಾವಿರ ಮಾಸಿಕ ಗ್ಯಾರಂಟಿ ಯನ್ನು ಕೂಡಲೇ ಜಾರಿಗೆ ತರಬೇಕು. ಇದೇ ೨೦೨೬ ಮಾರ್ಚ್ ರಾಜ್ಯ ಬಜೆಟ್ ನಲ್ಲಿ ಆಶಾ ಕರ‍್ಯಕರ್ತೆಯರಿಗೆ ರಾಜ್ಯ ಸರ್ಕಾರದ ಗೌರವಧನ ಹೆಚ್ಚಳ ಮಾಡ ಬೇಕು ಎಂದು ಒತ್ತಾಯಿಸಿದರು. ನಮ್ಮ ರಾಜ್ಯದಲ್ಲಿ ೪ ಲೇಬರ್ ಕೋಡ್‌ಗಳನ್ನು ಅನುಷ್ಠಾನಕ್ಕೆ ತರಬಾರದು ಮತ್ತು ಕನಿಷ್ಠ ವೇತನ ಪರಿಷ್ಕರಣೆ ಜಾರಿ ಗೊಳಿಸಬೇಕು ಎಂದು ಆಗ್ರಹಿಸಿದರು.


ಆಶಾ ಕರ‍್ಯಕರ್ತೆಯರ ಸಂಘದ ಜಿಲ್ಲಾ ಕರ‍್ಯದರ್ಶಿ ಕೆ.ವಿ. ಜ್ಯೋತಿ, ಮುಖಂಡರಾದ ಮಂಜುಳ, ಜ್ಯೋತಿ, ನಾಗಮ್ಮ, ಎಂ.ಬಿ. ಪುಷ್ಪಾವತಿ, ಪಲ್ಲವಿ, ಶೋಭ, ಸುಧಾ, ಇಂದ್ರ, ಶಾರದ ಸೇರಿದಂತೆ ಹಲ ವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು

ಮದ್ದೂರು: ನಾಲಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಮಾಲೋಚನಾ ಸಭೆ

ಯುವಜನತೆ ನಗರದ ಚಿತ್ರಣವನ್ನು ಕಣ್ತುಂಬಿಕೊಳ್ಳಿ – ಎನ್ ಚಲುವರಾಯಸ್ವಾಮಿ

Leave a Comment