ಪಾಲನೆ ನ್ಯೂಸ್
ಮಂಡ್ಯ: ಈ ತಿಂಗಳ ಓದಿನ ಹಾದಿ ಕಾರ್ಯಕ್ರಮದಲ್ಲಿ ವರ್ತಮಾನದ ತಲ್ಲಣ ಹಾಗೂ ಕವಿಯ ಹೊಣೆ ವಿಷಯವಾಗಿ ಬಂಡಾಯ ಕವಿ ಸಿದ್ದಲಿಂಗಯ್ಯನವರ ಕುರಿತು ಬೆಂಗಳೂರಿನ ಕವಿ, ವಿಮರ್ಶಕ, ಚಿಂತಕ ವಿ.ಎಲ್.ನರಸಿಂಹಮೂರ್ತಿ ಮಾತನಾಡಲಿದ್ದಾರೆ.

ಪರಿಚಯ ಪ್ರಕಾಶನ ಆಯೋಜಿಸುತ್ತಿರುವ ಈ ಕಾರ್ಯಕ್ರಮ ನಗರದ ಸುಭಾಷ್ ನಗರದ ಶಿವನಂಜಪ್ಪ ಪಾರ್ಕ್ ನಲ್ಲಿ ಇಂದು (ಫೆ.10)ಸಂಜೆ 6 ಗಂಟೆಗೆ ನಡೆಯಲಿದೆ.
ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷರು ಹಾಗೂ ಜನಪರ ವಕೀಲರಾದ ಬಿ.ಟಿ. ವಿಶ್ವನಾಥ್ ಅವರು ಓದಿನ ಹಾದಿಯ ಅನುಸಂಧಾನವನ್ನು ನಡೆಸಿಕೊಡಲಿದ್ದಾರೆ.
ಈ ಸಮಯದಲ್ಲಿ ಲೇಖಕಿ ಮತ್ತು ಉಪನ್ಯಾಸಕಿ ನಂದಾದೀಪ, ಗಾಯಕಿ ಐಶ್ವರ್ಯ ಅನಿಲ್, ಶಿಕ್ಷಕ್ಷಿ ರಾಧಿಕ ಎಸ್. ಕವಿತೆ ವಾಚಿಸಲಿದ್ದಾರೆ.ಇದೇ ವೇಳೆ ಗಾಮನಹಳ್ಳಿ ಸ್ವಾಮಿ, ಡೇವಿಡ್ ಪ್ರತಿಭಾಂಜಲಿ, ಎಚ್.ಎನ್. ದೇವರಾಜು ರವರು ಭಾವಗೀತೆಯನ್ನು ಹಾಡಲಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
