NEWS

ತುಪ್ಪ ಕಲಬೆರಕೆ ಗೊತ್ತಿದ್ದೂ ಟಿಟಿಡಿ ಖರೀದಿ‌ ಟೆಂಡ‌ರ್ ನಿಯಮವೂ ಸಡಿಲ : ಸಿಬಿಐ

ಪಾಲನೆ ನ್ಯೂಸ್

ತಿರುಪತಿ: ವಿಶ್ವಪ್ರಸಿದ್ಧತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ‘2019ರಿಂದ 2024ರ ಅವಧಿ ಯಲ್ಲಿ ರಾಸಾಯನಿಕಯುಕ್ತ ತುಪ್ಪ ಬಳಸುತ್ತಿರುವುದು ಪ್ರಯೋಗಾಲಯದ ಪರೀಕ್ಷೆ ಯಲ್ಲಿ ದೃಢಪಟ್ಟಿತ್ತು. ಇದರ ಅರಿವಿದ್ದೂಟಿಟಿಡಿತುಪ್ಪಖರೀದಿ ಮುಂದುವರಿಸಿತ್ತು’ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಹಿರಂಗಪಡಿಸಿದೆ.

2019-240 ಪರೀಕ್ಷೆಯಲ್ಲಿ ರಾಸಾಯನಿಕ ಅಂಶ ದೃಢ

ಕಲುಷಿತ ತುಪ್ಪ ಹಗರಣದಲ್ಲಿ ಮಹತ್ವದ ಅಂಶ ಬೆಳಕಿಗೆ

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ಮೈಸೂರಿನ ‘ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಡೆಸಿದ್ದ ಪರೀಕ್ಷೆಯಲ್ಲಿ, ತುಪ್ಪದಲ್ಲಿ ಬೀಟಾ-ಸೆಟೊಸ್ಟೆರಾಲ್ ಎಂಬ ರಾಸಾಯನಿಕ ಇರುವಿಕೆ ಪತ್ತೆ ಹಚ್ಚಿತ್ತು. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗಂಭೀರ ಗುಣಮಟ್ಟ ಸಮಸ್ಯೆ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳಲು ವಿಫಲವಾಯಿತು. 2020ರಲ್ಲಿ ಟಿಟಿಡಿ ಅಧಿಕಾರಿಗಳುಮೊದಲು ತುಪ್ಪದ ಟೆಂಡ‌ರ್ ನಿಯಮಗಳನ್ನು ಬಿಗಿಗೊಳಿಸಿದರು. ಆದರೆ ಯಾವುದೇ ಸ್ಪಷ್ಟನೆ ಕೊಡದೆ ಕೇವಲ ಐದೇ ತಿಂಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿದರು’ ಎಂದು ತಿಳಿಸಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಕ್ಕಳಿಗೆ ಗಮಕದ ಅರಿವು ಅಗತ್ಯ : ವಿ. ಸುಜಾತ ಕೃಷ್ಣ

56,432 ಹುದ್ದೆ ಭರ್ತಿಗೆ ಅಸ್ತು ; ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದ ಸರ್ಕಾರ

ಕೇಂದ್ರ ಬಜೆಟ್ 2026: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ 500 ಕೋಟಿ ರೂ ಘೋಷಣೆ

Leave a Comment