NEWS

ವಕೀಲೆ ಆದ ದೀದಿ!

ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ ದೇಶದ ಮೊದಲ ಮುಖ್ಯಮಂತ್ರಿ ಎರಡೂವರೆ ತಾಸು ಕಾದು ಎಸ್‌ಐಆರ್ ವಿರುದ್ಧ 15 ನಿಮಿಷ ವಕಾಲತ್ತು

ಪಾಲನೆ ನ್ಯೂಸ್

ನವದೆಹಲಿ: ವಿಶೇಷ ಮತಪಟ್ಟಿ ಪರಿಷ್ಕರಣೆ

(ಎಸ್‌ಐಆರ್) ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿದ ಅಪರೂ ಪದ ಘಟನೆಗೆ ಸುಪ್ರೀಂಕೋರ್ಟ್ ಬುಧವಾರ ಸಾಕ್ಷಿಯಾಯಿತು. ಜೊತೆಗೆ, ದೇಶದ ಇತಿಹಾಸ ದಲ್ಲೇ ಮುಖ್ಯಮಂತ್ರಿಯೊಬ್ಬರು ನ್ಯಾಯಾಲ ಯದಲ್ಲಿ ವಾದ ಮಂಡಿಸಿದ ಮೊದಲ ಘಟನೆ ಇದೆಂಬ ದಾಖಲೆಯೂ ಸೃಷ್ಟಿಯಾಯಿತು.

ಆ ವಿಷಯದ ಗಂಭೀರತೆ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ದೇಶದ ಗಮನ ಸೆಳೆಯಲು ಖುದ್ದು ವಾದ ಮಂಡನೆ

ಝಡ್ ಪ್ಲಸ್ ಭದ್ರತೆಯೊಂ ದಿಗೆ, ಹತ್ತಾರು ವಕೀಲರ ಜತೆ ಸುಪ್ರೀಂಕೋರ್ಟ್‌ಗೆ ಆಗಮಿಸಿದ ಬಂಗಾಳ ಸಿಎಂ

ಕಾರಿಡಾರ್‌ನಲ್ಲಿ ಮಮತಾ ಕಂಡು ವಕೀಲರು, ಜನರಿಗೆ ತೀವ್ರ ಅಚ್ಚರಿ. ಸೆಲ್ಪಿ ತೆಗೆದು ಕೊಳ್ಳಲು ಮುಗಿಬಿದ್ದ ಜನ

ಕೋರ್ಟ್ ಹಾಲ್‌ಗೆ ಹೋಗಿ, ಹಿಂದಿನ ಸಾಲಿನಲ್ಲಿ ಕುಳಿತ ಮಮತಾ. ಎರಡೂವರೆ ತಾಸು ಕಾದು ವಾದ ಮಂಡನೆ

ವಾಟ್ಸಪ್ ಚು. ಆಯೋಗಕ್ಕೆ ನಾವು ಟಾರ್ಗೆಟ್

ಪಶ್ಚಿಮ ಬಂಗಾಳ ದಲ್ಲಿ 58 ಲಕ್ಷ ಮಂದಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ ಮಾಡಲಾಗುತ್ತಿದೆ. ಚುನಾವಣಾ ಆಯೋಗ… ಕ್ಷಮಿಸಿ, ವಾಟ್ಸಪ್ ಆಯೋಗ ಇದನ್ನೆಲ್ಲ ಮಾಡುತ್ತಿದೆ. ಪಶ್ಚಿಮ ಬಂಗಾಳವನ್ನು, ರಾಜ್ಯದ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಮಮತಾ ಬ್ಯಾನರ್ಜಿ ಬಂಗಾಳ ಸಿಎಂ

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪೌತಿ ಖಾತೆ ಆಂದೋಲನವನ್ನು ಚುರುಕುಗೊಳಿಸಲು ಮತ್ತು ಕೆಲಸವನ್ನು ಸುಲಭಗೊಳಿಸಲು ಲ್ಯಾಪ್ ಟ್ಯಾಪ್ ವಿತರಣೆ

ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅಭಿನಂದನಾ ಗ್ರಂಥ ಲೋಕಾರ್ಪಣೆ, ಸಾವಯವ ಸಂತೆ, ವಧುವರರ ಅನ್ವೇಷಣೆ ಫೆ.14‌

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಅಕ್ಟೇರಿಯಂ

Leave a Comment