NEWS

ಕವಿ, ಶಿಕ್ಷಕ ಕೊನಾಪು ಇನ್ನಿಲ್ಲ

ಪಾಲನೆ ನ್ಯೂಸ್

ಮಂಡ್ಯ: ಕವಿಗಳು, ಶಿಕ್ಷಕರು ಆದ ಕೊ.ನಾ. ಪುರುಷೋತ್ತಮ ಅವರು ವಿಧಿವಶರಾಗಿದ್ದಾರೆ. ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆ. ೪) ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ ೫ ಗಂಟೆಗೆ ಅರಕೆರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ. ಮೃತರಿಗೆ ಪತ್ನಿ ಪೂರ್ಣಿಮಾ ಆರ್.‌, ಮಕ್ಕಳಾದ ಕೆ.ಪಿ. ವಿಜಯಕುಮಾರ್‌ ಹಾಗೂ ಕೆ.ಪಿ. ಅನನ್ಯ ಇದ್ದಾರೆ. ಅವರ ನಿಧನದಿಂದ ಅಪಾರ ಬಂಧು-ಮಿತ್ರರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಶಿಕ್ಷಕ ವೃತ್ತಿಯ ಜತೆಗೆ ಕಾವ್ಯವನ್ನೇ ಉಸಿರಾಗಿಸಿಕೊಂಡಿದ್ದ ಕೊನಾಪು ಎಂದೇ ಚಿರಪರಿಚಿತರಾಗಿದ್ದ ಮೇಷ್ಟರ ಕೊನೆಯ, ೨೬ನೇ  ಕೃತಿ ʻಐನೋರ್‌ ಮಗʼ  ವಾರದ ಹಿಂದೆಯಷ್ಟೇ ಲೋಕಾರ್ಪಣೆಗೊಂಡಿತು. ಜಿಲ್ಲೆಯ ಕವಿಮಿತ್ರರು ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿ ಅಭಿನಂದಿಸಿ ಶುಭ ಕೋರಿದ್ದರು.

Related posts

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶೇಷ ರಂಗೋಲಿ ಸ್ಪರ್ಧಾ

ಮಳವಳ್ಳಿ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪ್ರಜಾಸೌಧದ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ  ಮಳವಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

Leave a Comment