NEWS

ಬೂದನೂರು ಉತ್ಸವ 2026 ರಲ್ಲಿ ಹೆಲಿ ಟೂರಿಸಂ ಆಯೋಜನೆ ಮಾಡುವ ಪ್ರಯುಕ್ತ ಸ್ಥಳ ಪರಿಶೀಲನೆ

ಪಾಲನೆ ನ್ಯೂಸ್

ಮಂಡ್ಯ: ಫೆಬ್ರವರಿ 21,22 ರಂದು ನಡೆಯಲಿರುವ ಬೂದನೂರು ಉತ್ಸವ 2026 ರಲ್ಲಿ ಸದರಿ ವರ್ಷ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹೆಲಿ ಟೂರಿಸಂ ಅನ್ನು ಆಯೋಜನೆ ಮಾಡಲಾಗಿದೆ.

ಫೆಬ್ರವರಿ 20 ರಿಂದ 3 ದಿನಗಳ ಕಾಲ ಜಿಲ್ಲೆಯಲ್ಲಿ ಬೂದನೂರಿನಲ್ಲಿ ಹೆಲಿ ಟೂರಿಸಂ ಅನ್ನು ಆಯೋಜನೆ ಮಾಡಲಾಗಿದ್ದು ಸಾರ್ವಜನಿಕರು ಹೆಲಿಕಾಪ್ಟರ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಬಹುದು ಈ ನಿಟ್ಟಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಇಂದು ಬೂದನೂರಿನ ಅಮರಾವತಿ ಬಳಿ ಹೆಲಿಕಾಪ್ಟರ್ ನಿಲ್ಲುವ ಸ್ಥಳವನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವಕೀಲೆ ಆದ ದೀದಿ!

180 ಅಪ್ರಾಪ್ತ ಬಾಲಕಿಯರನ್ನ ಲೈಂಗಿಕವಾಗಿ ಶೋಷಿಸಿದ್ದಲ್ಲದೆ 350 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಯುವಕನ ಸೆರೆ

ಯುವ ಜನತೆಯೂ ಡಾ. ರಾಜ್ ಕುಮಾರ್ ರವರ ಸರಳ ಜೀವನ ಶೈಲಿ ಹಾಗೂ ಅವರ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ : ಬಿ. ಪಿ. ಪ್ರಕಾಶ್

Leave a Comment