NEWS

ಪದ್ಮಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರಿಗೆ ಜಿಲ್ಲಾಧಿಕಾರಿ ಸನ್ಮಾನ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅವರು  ಪಾಂಡವಪುರ ತಾಲೂಕಿನ ಹರಳಹಳ್ಳಿಯ ಪದ್ಮ ಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡ ಅವರು ನಿರ್ಮಿಸಿರುವ ‘ಪುಸ್ತಕ ಮನೆ’ ಗೆ ಭೇಟಿ ನೀಡಿ ಗೌರವಿಸಿದರು.

ಪುಸ್ತಕ ಮನೆಯಲ್ಲಿ ಸಂಗ್ರಹಿಸಲಾಗಿರುವ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಪುಸ್ತಕಗಳು, ನಾಣ್ಯಗಳು, ಅಂಚೆ ಚೀಟಿಗಳು ಮತ್ತು ಅಪರೂಪದ ಲಗ್ನ ಪತ್ರಿಕೆಗಳನ್ನು ವೀಕ್ಷಸಿದರು.

ಜಿಲ್ಲಾಧಿಕಾರಿಗಳು ಪದ್ಮ ಶ್ರೀ ಪ್ರಶಸ್ತಿ ವಿಜೇತ ಅಂಕೇಗೌಡರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ನಂತರ ಅವರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರ ಉಪ ತಹಸೀಲ್ದಾರ್ ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

ಭತ್ತದ ಹೈಟೆಕ್ ಕಟಾವು ಯಂತ್ರಗಳ (Hitech Combined Harvestors Paddy) ಕುರಿತಾಗಿ 2 ದಿನಗಳ ತರಬೇತಿ

ಜಮ್ಮುವಿನಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌ 21 ಮಂದಿ ಸಾವು

ಇಂದು ಮಂಡ್ಯ ಜಿಲ್ಲಾ ಮಟ್ಟದ ಉದ್ಯೋಗ ಮೇಳ

Leave a Comment