NEWS

ಪರಿಸರವು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ: ಡಾ. ಕುಮಾರ

ಪ್ರಾಥಮಿಕ ಹಂತದಲ್ಲಿ ಕಸ ವಿಂಗಡಣೆ ಆಗಬೇಕು, ಜನರಲ್ಲಿ ಅರಿವು ಮೂಡಿಸುವುದು ಬಹಳ ಅಗತ್ಯ

ಪಾಲನೆ ನ್ಯೂಸ್

ಮಂಡ್ಯ: ಸ್ವಚ್ಛ ಭಾರತ್ ಮಿಷನ್ (ನಗರ ) 2.0 ಯೋಜನೆಯಡಿಯಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ 2025-26 ವಿಷಯದ ಕುರಿತು ತರಬೇತಿ ಕಾರ್ಯಾಗಾರವನ್ನು ನಗರಸಭೆಯ ಧಾರಣಪ್ಪ ಸಭಾಂಗಣದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ನಗರ ಮತ್ತು ಪರಿಸರವನ್ನು ಸ್ವಚ್ಛ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ರವರು ಹೇಳಿದರು.

ಮನೆಗಳಲ್ಲಿ  ಪ್ರಾಥಮಿಕ ಹಂತದಲ್ಲಿ ಕಸ ವಿಂಗಡಣೆ ಆಗಬೇಕು. ಇದರ ಬಗ್ಗೆ  ಸಾರ್ವಜನಿಕರಿಗೆ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದ್ದು  ಮನೆಮನೆಯಲ್ಲಿ ಜಾಗೃತಿ ಮೂಡಿಸಿ ಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸುವುದು ಸೂಕ್ತ ಎಂದು ಜಿಲ್ಹಾಧಿಕಾರಿ ಡಾ. ಕುಮಾರ ರವರು ಹೇಳಿದರು.

ನಗರದ ಅಭಿವೃದ್ಧಿ ಸಮಾಜದ ಅಭಿವೃದ್ಧಿ ಜೊತೆಗೆ ಪರಿಸರ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ಹೆಚ್ಚು ಆಗಬೇಕು.

ಸ್ವಚ್ಛ ಭಾರತ್ ಮಿಷನ್ ನ ಅಧಿಕಾರಿಗಳ ಕಾರ್ಯ ವೈಖರಿ,  ಪ್ರಯತ್ನ, ಪರಿಶ್ರಮ, ಬಹಳ ಮುಖ್ಯ. ಸ್ವಚ್ಛ ಭಾರತ್ ಮಿಷನ್ (ನಗರ ) 2.0 ಯೋಜನೆಯಡಿಯಲ್ಲಿ ಬರುವ ಮಾನದಂಡಗಳು ಮತ್ತು ಸೂಚನೆಗಳನ್ನು ಪಾಲಿಸುವ ಮೂಲಕ ನಗರಕ್ಕೆ ಒಳ್ಳೆಯ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು.

ಸ್ವಚ್ಛತೆಯು ಸಾಮಾಜಿಕ ಹೊಣೆಗಾರಿಕೆ ಆಗಿದೆ. ಆದ್ದರಿಂದ ಸುಸ್ಥಿತ ಸಮಾಜದಲ್ಲಿ ನಗರದ ಜನರು ಪ್ರಜ್ಞಾವಂತರಾಗಿ ಬುದ್ದಿವಂತರಾಗಿ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು.

ನಮ್ಮ ಪರಿಸರವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಜಾಗೃತಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ರಸ್ತೆ ಬದಿಯಲ್ಲಿ ಕಸ ಹಾಕುವುದು ಕಾನೂನು ಉಲ್ಲಂಘನೆ, ರಸ್ತೆ ಬದಿಯಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಸ್ವಚ್ಛ ಮನಸ್ಸಿದ್ದರೆ ಮಾತ್ರ ಸ್ವಚ್ಛ ಪರಿಸರ ಉಳಿಸಲು ಸಾಧ್ಯ. ಸಾರ್ವಜನಿಕರಿಗೆ ಪರಿಸರ ಸ್ವಚ್ಛತೆಯನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವುದು ನಮ್ಮ ನಗರದಲ್ಲಿ 100%  ಕಸ ಸಂಗ್ರಹಣೆ ಆಗುತ್ತಿದೆ. ಕಸವನ್ನು ಸಂಗ್ರಹಣೆ ಮಾಡುವುದು ಎಷ್ಟು ಮುಖ್ಯವೋ ಕಸ ವಿಂಗಡಣೆಯು ಕೂಡ ಬಹಳ ಮುಖ್ಯ ಆದ್ದರಿಂದ ಕಸ ವಿಂಗಡಣೆ ಮಾಡಬೇಕು. ಹಸಿಕಸ, ಒಣಕಸವನ್ನು ವಿಂಗಡಿಸಬೇಕು ಹಾಗೂ ಪ್ಲಾಸ್ಟಿಕ್ ಅನ್ನು ಬಳಸಬಾರದು ಎಂದು ಸೂಚಿಸಿದರು.

ನಗರದ ಸ್ವಚ್ಛತೆಯನ್ನು ಸಮಾಜದ ನೈರ್ಮಲ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ. ಮಹಾತ್ಮಾ ಗಾಂಧಿಜೀ ರವರ ಜನ್ಮ ದಿನ ಅಂಗವಾಗಿ ಅವರ ಚಿಂತನೆಗಳನ್ನು ಇಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ತಿಳಿಸಲು ಸ್ವಚ್ಛ ಸರ್ವೇಕ್ಷಣ ಅಭಿಯಾನದ ಸಾಕ್ಷ್ಯಚಿತ್ರದ ದಾಖಲೆಗಳು ಮತ್ತು ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.

ಕಸವನ್ನು ಮರುಬಳಕೆ ಮಾಡಿ ಗೊಬ್ಬರವಾಗಿ ಪರಿವರ್ತಿಸಿ ಕಸದಿಂದ ಆದಾಯಗಳಿಸುವಂತಹ ಕೆಲಸವನ್ನು ಮಾಡಬೇಕು ನಗರದ ಪರಿಸರ ಸ್ವಚ್ಛತೆಯಿಂದ ಇದ್ದಾಗ ಮಾತ್ರ ನಗರ ಅಭಿವೃದ್ಧಿಯಾಗಲು ಸಾಧ್ಯ. ಕಸ ಮುಕ್ತ ನಗರವನ್ನಾಗಿ ಮಾಡುವುದು ನಮ್ಮೆಲರ ಜವಾಬ್ದಾರಿ ಎಂದು ಹೇಳಿದರು.

 ನಗರಾಭಿವೃದ್ಧಿ ಕೋಶ ಜಿಲ್ಲಾ ಯೋಜನಾ ನಿರ್ದೇಶಕರಾದ ನರಸಿಂಹಮೂರ್ತಿ ಟಿ.ಎನ್ ರವರು ಮಾತನಾಡಿ ನಗರವನ್ನು ಕಸಮುಕ್ತ ಹಾಗೂ ಬಯಲು ಶೌಚ ಮುಕ್ತವಾಗಿ ಮಾಡಬೇಕು. ಹಸಿ ಕಸ ಒಣ ಕಸವನ್ನು ವಿಂಗಡಿಸಿ ಡಸ್ಟ್ ಬಿನ್ ಗೆ ಹಾಕುವುದು. ಹಾಗೂ ಪ್ಲಾಸ್ಟಿಕ್ ಮುಕ್ತ ನಗರವಾಗಿ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಸಭೆಯ ಪೌರಾಯುಕ್ತರಾದ ಪಂಪ ಶ್ರೀ,‌ ಪರಿಸರ ವಿಭಾಗದ ಅಭಿಯಂತರರಾದ ರುದ್ರೇಗೌಡ, ಸಹಾಯಕ ಅಭಿಯಂತರರಾದ ಪ್ರತಾಪ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಕರ್ನಾಟಕದಲ್ಲಿ 2027ರ ಜನಗಣತಿ‌ ಏ.16ರಂದು ಮನೆ ಪಟ್ಟಿ ಕಾರ್ಯ ಆರಂಭ

ಹೈಕೋರ್ಟ್ ಪ್ರಶ್ನೆ: ಹೆಣ್ಣು ಮಗು ಎಂದರೆ ಅಷ್ಟೊಂದು ತಾತ್ಸಾರವೇ ?

ಮಹಿಳಾ ಸಬಲೀಕರಣಕ್ಕಾಗಿ ನೀತಾ ಅಂಬಾನಿಯ ಹೊಸ ಹೆಜ್ಜೆ

Leave a Comment