ಪಾಲನೆ ನ್ಯೂಸ್
ನವದೆಹಲಿ: ಉತ್ತರ ಥಾಯ್ಲೆಂಡ್‌ನ ಪ್ರವಾಸಿಗರ ಆಕರ್ಷಣೆ ತಾಣಗಳಾದ ಎರಡು ಹುಲಿ ಧಾಮಗಳಲ್ಲಿ ನಿಗೂಢ ರೋಗಕ್ಕೆ ಕನಿಷ್ಠ 72 ಹುಲಿಗಳು ಬಲಿಯಾಗಿವೆ. ಈ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಹುಲಿಗಳನ್ನು ಮೈದಡವಲು ಅವಕಾಶವಿದೆ.

ಪಾರ್ಕ್‌ನ ಒಟ್ಟು ಹುಲಿಗಳ ಪೈಕಿ ಶೇಕಡ 30ರಷ್ಟು ವ್ಯಾಘ್ರಗಳು ಫೆಬ್ರವರಿ 8ರಿಂದ 19ರ ನಡುವೆ ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಧಾಮವನ್ನು 14 ದಿನ ಕಾಲ ಮುಚ್ಚಲಾಗಿದ್ದು ನಿಸೋಂಕೀಕರಣ ಮತ್ತು ಲಸಿಕೀಕರಣ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಣಿಗಳಲ್ಲಿ ತೀವ್ರ ಸಾಂಕ್ರಾಮಿಕವಾದ ಕೆನೈನ್ ಡಿಸ್ಟೆಂಬರ್ ವೈರಸ್ (ಸಿಡಿವಿ) ಮೃತ ಹುಲಿಗಳ ಮಾದರಿಗಳಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮನುಷ್ಯರಿಗೆ ಇದು ಹರಡಿಲ್ಲ ಎಂದವರು ದೃಢಪಡಿಸಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
