ಮೂಲ ನಕ್ಷೆ ಬದಲು, ಅಧಿಕಾರಿಗಳ ಕೈಚಳಕ: ಆರೋಪ
ಪಾಲನೆ ನ್ಯೂಸ್
ಮಂಡ್ಯ: ದೇವಲಾಪುರ ಹೋಬಳಿ ಸಮೀಪದ ಮುಸಂದ್ರ ಗ್ರಾಮದಲ್ಲಿ ಕೆರೆ, ಗೋಮಾಳ, ಸ್ಮಶಾನ ಜಾಗವನ್ನು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸರ್ಕಾರಿ ಜಾಗಗಳ ಮೂಲ ನಕ್ಷೆ ಬದಲು ಮಾಡಿಕೊಂಡು ಕೆರೆಗೆ ಸೇರಿದ ಸ್ಮಶಾನ ಹಾಗೂ ಗೋಮಾಳ ಜಾಗವನ್ನು ಇದೇ ಗ್ರಾ ಮದ ಕೆಲವರು ಅತಿ ಕ್ರಮಣ ಮಾಡಿದ್ದು, ಅಧಿಕಾರಿಗಳು ಕೂಡಲೇ ಅತಿಕ್ರಮಣ ತೆರವುಗೊಳಿಸುವಂತೆ ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ. ನಾಗಮಂಗಲ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಕೆರೆ ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದೆ. ಈಗ ಇದ ವಿಸ್ತೀರ್ಣ ಕೇವಲ 6 ಎಕರೆಗೆ ಇಳಿದಿದೆ. 24/6.26/4, ಗ್ರಾಮದ ಗೋಮಾಳ ಸರ್ವೇ ನಂಬರ್ 40/7 ನಾಲ್ಕುವರೆ ಎಕರೆ ಹಾಗೂ ಸ್ಮಶಾನ ಒಂದುವರೆ ಎಕರೆ, ಸರ್ವೇ ನಂಬರ್35 ಪಿ ಜಾಗಗಳು ಗ್ರಾಮದ ಬಲಾಡ್ಯರಿಂದ ಅತಿ ಕ್ರಮಣವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ಅಳತೆ ಮಾಡಿ ಅತಿಕ್ರಮಣದ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಕೆರೆ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.

ಈ ಸಂಬಂಧ ಎಲ್ಲಾ ದಾಖಲೆ ಸಮೇತ ದೂರು ನೀಡಿದ್ದರೂ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿರುವ ಬಲಾಡ್ಯರು, ಇದಕ್ಕೆ ಕೈ ಜೋಡಿಸಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ. ವಿಳಂಬ ಮಾಡಿದರೆ ತಾಲೂಕು ಮಟ್ಟದಲ್ಲಿ ದೊಡ್ಡ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


