NEWS

ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ-ಡಾ.ಕುಮಾರ

ಪಾಲನೆ ನ್ಯೂಸ್‌

ಮಂಡ್ಯ: ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ ಎಂದು ಶಿವಯೋಗಿ ಸಿದ್ದರಾಮೇಶ್ವರ ಅವರು ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶಿವಯೋಗಿ ಸಿದ್ದರಾಮೇಶ್ವರ ಅವರು ಒಬ್ಬ ಕಾಯಕ ಯೋಗಿಯಾಗಿ, ಜ್ಞಾನ ಯೋಗಿಯಾಗಿ ವಚನಗಳ ಮೂಲಕ ಹಲವಾರು ಕೊಡುಗೆಗಳು ಮತ್ತು ಸಂದೇಶಗಳನ್ನು ನೀಡುವ ಮೂಲಕ ಜನಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಶಿವಯೋಗಿಗಳ ಸಮಾಜಸೇವೆ ಮನೋಭಾವನೆ, ಅವರ ಕೊಡುಗೆ ಮತ್ತು ಅವರ ಚಿಂತನೆಗಳನ್ನು ಎಲ್ಲರೂ ಓದಿ ತಿದುಕೊಳ್ಳಬೇಕು. ಶಿವಯೋಗಿ ಸಿದ್ದರಾಮೇಶ್ವರ ರವರು ತಮ್ಮ ವಚನಗಳಲ್ಲಿ ಎರಡು ಅಂಕಿತನಾಮಗಳ ಬಳಸಿದ್ದಾರೆ. ಸಮಾಜ ಸೇವೆಯ ಮೂಲಕ ಶಿವನನ್ನು ಕಾಣಬಹುದು ಎಂದು ಸಾರಿದವರು ಶಿವಯೋಗಿ ಸಿದ್ದರಾಮೇಶ್ವರ ಅವರು ಎಂದು ಹೇಳಿದರು.

ಶಿವಯೋಗಿ ಸಿದ್ದರಾಮೇಶ್ವರ ರವರು ಮಾನವೀಯತೆ ಒಂದೇ ಜಾತಿ ಒಂದೇ ಧರ್ಮ ಎಂಬ ಸಂದೇಶವನ್ನು ಅವರ ವಚನಗಳ ಮೂಲಕ ನೀಡಿದ್ದಾರೆ. ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಎಲ್ಲರನ್ನೂ ಸಬಲರನ್ನಾಗಿಸಬೇಕು, ಸಮಾಜದಿಂದ ಜಾತಿಯತೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದರು ಎಂದು ಹೇಳಿದರು.

12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅವರ ವಿಚಾರಧಾರೆಯನ್ನು ನೀಡಿದ್ದಾರೆ. ಅನಕ್ಷರತೆ ಮೂಡನಂಬಿಕೆ ಇದ್ದಂತಹ ಸಂದರ್ಭದಲ್ಲಿ ಜಾತಿಯತೆಯ ವಿರುದ್ಧ ಹೋರಾಡಿದವರು ಶಿವಯೋಗಿ ಸಿದ್ದರಾಮೇಶ್ವರರು. ಮಾನವೀಯತೆಯೇ ವಿಶೇಷವಾದ ಧರ್ಮ. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಗೌರವಿಸಬೇಕು. ನಮ್ಮ ಕೆಲಸದ ಮೂಲಕ ನಾವು ದೇವರನ್ನು ಕಾಣಬೇಕು ಹಾಗೂ ಸಮಾನತೆಯನ್ನು ಕಾಣಬೇಕು ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.

ಮಂಡ್ಯ ನಿವೃತ್ತ ಶಿಕ್ಷಣಾಧಿಕಾರಿಗಳಾದ ಮಹಾ ದೇವಪ್ಪನವರು ಮಾತನಾಡಿ ಬಾಲ್ಯದಿಂದಲೂ ಶಿವಯೋಗಿ ಸಿದ್ದರಾಮೇಶ್ವರರವರು ಯಾರ ಜೊತೆಯೂ ಬೆರೆಯುತ್ತಿರಲಿಲ್ಲ ಹೆಚ್ಚು ಮಾತನ್ನು ಕೂಡ ಆಡುತ್ತಿರಲಿಲ್ಲ ಅವರ ದಿನನಿತ್ಯದ ಕಾರ್ಯ ಹಸುಗಳನ್ನು ಮೇಯಿಸುವುದಾಗಿತ್ತು. ಬಿಜಾಪುರದಿಂದ 40 ಕಿಲೋಮೀಟರ್ ದೂರದಲ್ಲಿ ಈಗಲೂ ಕೂಡ ಶಿವಯೋಗಿ ಸಿದ್ದರಾಮೇಶ್ವರ ರವರ ಸಮಾಧಿ ಇದೆ. ಲೋಕ ಕಲ್ಯಾಣಕ್ಕಾಗಿ ಅವರು ಕಟ್ಟಿಸಿದ ಕೆರೆ ಈಗಲು ಸುಸ್ಥಿತಿಯಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ್ ಸೇರಿದಂತೆ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವೆಸ್ಟ್ಇಂಡೀಸ್‌ಗೆ ಇಟಲಿ ವಿರುದ್ದ ಜಯ

ಡಾ. ಶಿವಕುಮಾರ ಸ್ವಾಮೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳೋಣ: ಟಿ.ಎಸ್.‌ ಸತ್ಯಾನಂದ

17 ಮಂದಿ ಸಾವು ; 18 ಮಂದಿ ಗಾಯ

Leave a Comment