NEWS

ಖಾಲಿ‌ ಇರುವ ಹುದ್ದೆಗೆ ಭರ್ತಿ, ನೇಮಕಾತಿಗೆ ಅಕ್ರಮ ತಡೆ ಆಗ್ರಹ

ಪಾಲನೆ ನ್ಯೂಸ್

ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗಾಗಿ, ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆ ಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ನಗರ ಬಸ್ ನಿಲ್ದಾಣದಲ್ಲಿ ಸಹಿಸಂಗ್ರಹ ಅಭಿಯಾನವನ್ನು ಮಾಡಲಾಯಿತು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಭಯನಕ ರೂಪವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ 78 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಗಳಲ್ಲೂ ಸಹ 2.85 ಲಕ್ಷ ಹುದ್ದೆಗಳು ಖಾಲಿ ಇವೆ ಮತ್ತು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪರಿಸ್ಥಿತಿ ಇದೇ ರೀತಿ ಇದೆ. ಇದರ ಹೊರತಾಗಿ, 2014ರಲ್ಲಿ ಎನ್‌ಡಿಎ ಸರ್ಕಾರ ಪ್ರತಿ ವರ್ಷ ಯುವಜನರಿಗೆ 2 ಕೋಟಿ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರೂ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಉದ್ಯೋಗಿಗಳ ವಜಾ ಮತ್ತು ಸರ್ಕಾರಿ ಇಲಾಖೆಗಳ ಖಾಸಗೀಕರಣವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ದೂರಿದರು.

ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, ಪ್ರತಿಯೊಬ್ಬರಿಗೂ ಅವರವರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನು ಗುಣವಾಗಿ ಉದ್ಯೋಗ ಒದಗಿಸಬೇಕಿರುವುದು ಸರ್ಕಾರದ ಕರ್ತವ್ಯ. ಅಲ್ಲದೇ ನಮ್ಮ ದೇಶವು ಜನರ ಬೇಡಿಕೆಗಳನ್ನು ಪೂರೈಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ. ಆದರೆ, ಈ ನಿರುದ್ಯೋಗ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮಾನಸಿಕ ಖಿನ್ನತೆ, ಕುಟುಂಬ ಸಂಬಂಧಗಳಲ್ಲಿ ಬಿರುಕು ತತ್ಪರಿಣಾಮವಾಗಿ ಯುವಜನರಲ್ಲಿ ಮಾದಕ ವ್ಯಸನಗಳು, ಅಪರಾಧ ಪ್ರವೃತ್ತಿಗಳು ವೇಗವಾಗಿ ಹೆಚ್ಚುತ್ತಿವೆ. ಇದಲ್ಲದೆ, ಪ್ರತಿ ವರ್ಷ ಸಾವಿ ರಾರು ಯುವಜನರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. 2023ರಲ್ಲಿ ಯುವಜನರ ಆತ್ಮಹತ್ಯೆಗಳ ಪ್ರಮಾಣ 14,234ಕ್ಕೆ ಹೆಚ್ಚಿದೆ. ಆದ್ದರಿಂದ, ಈ ಸಮಸ್ಯೆಗಳಿಂದ ಯುವ ಜನರನ್ನು ರಕ್ಷಿಸಲು ಮತ್ತು ಸಾಮಾಜಿಕ ರಚನೆಯನ್ನು ಸಂರಕ್ಷಿಸಲು, ದೇಶ ವ್ಯಾಪಿ ಸಹಿಸಂಗ್ರಹ ಅಭಿಯಾನ ನಡೆಯುತ್ತಿದೆ.

ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಸುನಿಲ್‌, ಜಂಟಿ ಕಾರ್ಯ ದರ್ಶಿಗಳಾದ ನೀತು ಶ್ರೀ ಮತ್ತು ಜಿಲ್ಲಾ ಸಮಿತಿಯ ಸದಸ್ಯರಾದ ರಣಜಿ ಮತ್ತು ಪೂರ್ಣಿಮಾ ಹಾಜರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ : ಡಿಕೆಶಿ ಪಾರು

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ . (HPV) ಲಸಿಕೆ ಪಡೆಯವಂತೆ ಜಾಗೃತಿ ಮೂಡಿಸಿ – ಡಾ. ಕುಮಾರ

ಗ್ರಾಮೀಣ ಮಹಿಳೆಯರಿಗೆ 10 ದಿನ ಅಣಬೆ ಕೃಷಿ ತರಬೇತಿ

Leave a Comment