ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು
ಪಾಲನೆ ನ್ಯೂಸ್

ಮಂಡ್ಯ: ನಮಗೆ ಸಂವಿಧಾನವನ್ನು ಮಾತ್ರ ಕೊಡಲಿಲ್ಲ. ಬುದ್ದನ ಮೂಲಕ ಮತ್ತೊಂದು ಶಕ್ತಿಶಾಲಿಯಾದ ಸಾಂಸ್ಕೃತಿಕ ಸಂವಿಧಾನವನ್ನು ನೀಡಿದ್ದಾರೆ ಎಂದು ವಿದ್ವಾಂಸ ನಟ ರಾಜ ಬೂದಾಳ್ ಹೇಳಿದರು.
ನಗರದ ಕಿರುರಂಗಮಂದಿರದಲ್ಲಿ ‘ಬಹುರೂಪಿ -ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾನುವಾರ ನಡೆದ ‘ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಬುದ್ಧನನ್ನು ಯಾಕೆ ಸ್ವೀಕರಿಸಿದ್ದಾರೆ ಎಂದರೆ ಬುದ್ದ ವಿಜ್ಞಾನಿ ಎಂದು, ಲೋಕದ ಸಂಕಟಕ್ಕೆ ಸೂಕ್ತ ಪರಿಹಾರ ಸೂಚಿಸಿದ ವೈದ್ಯ ಬುದ್ದ. ಜಗತ್ತಿನ ಎಲ್ಲ ಧರ್ಮಗಳನ್ನೂ ಅಧ್ಯಯನ ಮಾಡಿದ ಸಾಹೇಬರು ಯಾವ ಧರ್ಮಕ್ಕೂ ಸೇರದೆ ಇರಬಹುದಾ ಗಿತ್ತು. ಆದರೆ, ಬೌದ್ಧ ಧರ್ಮವನ್ನು ಆಯ್ಕೆ ಮಾಡಿ ಕೊಂಡರು. ಆದರೆ, ನಾವಿಂದು ಬುದ್ದ ಜ್ಞಾನವನ್ನು ನೋಡದೆ ಧ್ಯಾನಸ್ಥ ಮೂರ್ತಿಯನ್ನು ಆರಾಧಿಸುತ್ತಿದ್ದೇವೆ ಎಂದು ಹೇಳಿದರು.
ಆಧ್ಯಾತ್ಮಿಕತೆ ಧರ್ಮಗಳನ್ನು ದಾಟದ ಸಂಗತಿ. ಜಗತ್ತಿನಲ್ಲಿ ಪೊಳ್ಳು ತತ್ವಜ್ಞಾನಗಳು, ಸುಳ್ಳು ಧರ್ಮಗಳು ಸಾವಿರಾರು ವರ್ಷಗಳಿಂದ ನಮ್ಮ ಬದುಕನ್ನು ಈಡಾಗಿ ಸುತ್ತಾ ಬಂದಿರುವುದಕ್ಕೆ ಪ್ರತಿಯಾಗಿ ಆಧ್ಯಾತ್ಮಿಕತೆ ಬಳಸ ಬಹುದು.
ಯೂರೋಪಿನಲ್ಲಿ ಜೆನ್ ಜಿ ಜನಾಂಗದ ಶೇ.65ರಷ್ಟು ಯುವಕರು ತಾವು ಯಾವ ಧರ್ಮಕ್ಕೂ ಸೇರಿದವರಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇದನ್ನು ಬಹಳ ಎಚ್ಚರ ದಿಂದ ಗಮನಿಸಬೇಕು ಎಂದರು. ಸಂವಿಧಾನ ನಮ್ಮ ಬದುಕಿನ ನಡೆಗಳನ್ನು ನಿರ್ಣಯಿಸಲಿದೆ. ಇಂದು ನಾವು ಅನೇಕ ದುಷ್ಟ ಸಮೀಕರಣಗಳ ನಡುವೆ ಇದ್ದೇವೆ.
ಡಾ. ಬಿ.ಆರ್.ಅಂಬೇಡ್ಕರ್ ತರಬೇತಿ, ಸ ಹಾಗೂ ವಿಸ್ತರಣಾ ಕೇಂದ್ರ, ಸಮಾಜ
ಜಗತ್ತಿನಲ್ಲಿ ಬೌದ್ಧ ಧರ್ಮವು ಧಮ್ಮವನ್ನು ಮರು ವ್ಯಾಖ್ಯಾನಿಸುವ ಹಾಗೂ ತನಗೆ ತಾನೇ ಸರಿದಾರಿಯನ್ನು ಕಂಡುಕೊಳ್ಳಲು ಮಾರ್ಗ ತೋರುವ ಧಮ್ಮವಾಗಿದೆ. ಬುದ್ದ ಪ್ರಶ್ನಾತೀತ ಎಂದು ಯಾವುದನ್ನೂ ನಂಬಬೇಡ. ಪ್ರಶ್ನಿಸು, ನಿನಗೆ ಒಪ್ಪಿತವಾದ ನಂತರ ಅದಕ್ಕೆ ಬದ್ಧನಾಗಿ ನಡೆದುಕೋ ಎಂದು ಹೇಳಿದ್ದಾರೆ. ಅಂಬೇಡ್ಕರ್ ತೋರಿದ ಬುದ್ದ ಬೆಳಕು, ಮಂಟೇಸ್ವಾಮಿ ತೋರಿದ ಕೈ ಬೆಳಕು ಹಿಡಿದು ಮುಂದೆ ನಡೆಯಬೇಕಿದೆ.
-ನಟರಾಜ ಬೂದಾಳ್, ವಿದ್ವಾಂಸ
ಆಧ್ಯಾತ್ಮಿಕತೆ ಎದುರು ಧರ್ಮಗಳಿವೆ. ಜೀತದ ಬಿಡು ಗಡೆಗೆ ಬೇಕಿರುವುದು ಆಧ್ಯಾತ್ಮಿಕತೆ. ಪ್ರಜಾಸತ್ತೆಗಿಂತ ಮೀರಿದ ಧರ್ಮ ಬೇರೆ ಇಲ್ಲ ಎಂದರು. ಭಾರತದಲ್ಲಿ ಅದೆಷ್ಟೋ ಕಾಲೋನಿಗಳಿವೆ. ಭಾಷೆ, ಲಿಂಗದ ಕಾಲೋನಿ ಗಳಿವೆ. ತುಳಿಯುವ ಜಾತಿ ಕೂಡ ಒಂದು ಕಾಲೋನಿ. ತುಳಿಸಿಕೊಳ್ಳುವ ಜಾತಿ ಕೂಡ ಒಂದು ಕಾಲೋನಿಯಾಗಿದೆ. ತುಳಿಯುವವನಿಗೂ ಅದೇ ಬಂಧನ. ತುಳಿಸಿಕೊಳ್ಳುವವ ನಿಗೂ ಅದೇ ಬಂಧನ. ತಾತ್ವಿಕತೆಯ ಜೀತ ಅತ್ಯಂತ ಹೀನಾ ಯವಾದದ್ದು. ದಲಿತರು ಮಾತ್ರವಲ್ಲ, ಬ್ರಾಹ್ಮಣರೂ ತಾತ್ವಿಕತೆಯ ಜೀತ ಮಾಡುತ್ತಿದ್ದಾರೆ ಎಂದರು. ಬೈಲಕುಪ್ಪೆಯ ಸೆರಾಜೆ ಬಿಕ್ಕು ತರಬೇತಿ ಕೇಂದ್ರದ ಬಂತೆ ತುಪ್ಪನ್ ಕಲ್ದಾನ್ ವಿಷಯ ಮಂಡಿಸಿದರು.
