NEWS

ರಷ್ಯಾದಿಂದ ತೈಲ: ಭಾರತದ ಮೇಲೆ ಅಮೆರಿಕದಿಂದ ಮತ್ತಷ್ಟು ದಂಡನೆ? ಹೊಸ ಮಸೂದೆ ಶೀಘ್ರ

ಪಾಲನೆ ನ್ಯೂಸ್

ರಷ್ಯಾ ಮೇಲೆ ನಿರ್ಬಂಧ ಹೇರುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಸಿರು ನಿಶಾನೆ ತೋರಿದ್ದಾರೆ ಎಂದು ಅಮೆರಿಕ ಸೆನೇಟ‌ರ್ ಲಿಂಡ್‌ಜಿ ಗ್ರಹಾಮ್ ಹೇಳಿದ್ದಾರೆ.

ಶೀಘ್ರವೇ ಇದನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳನ್ನು ಈ ಕಾನೂನಿನ ಮೂಲಕ ದಂಡಿಸಲಾಗುತ್ತದೆ.

ಈ ಬಗ್ಗೆ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಹಲವು ಸಂಸದರೊಂದಿಗೆ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಮಸೂದೆಗೆ ಅನುಮೋದನೆ ದೊರಕಿದರೆ, ಇಂಧನ ಸೇರಿ ರಷ್ಯಾದೊಂದಿಗೆ ವ್ಯವಹಾರ ಮಾಡುತ್ತಿರುವ ರಾಷ್ಟ್ರಗಳ ಮೇಲೆ ನಿರ್ಬಂಧ ಹಾಗೂ ಭಾರಿ ಪ್ರಮಾಣದ ತೆರಿಗೆ ಹೇರಲಾಗುವುದು ಎಂದು ಗ್ರಹಾಮ್ ಹೇಳಿದ್ದಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ವೈರಮುಡಿ ಬ್ರಹ್ಮೋತ್ಸವದಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿ : ದರ್ಶನ್ ಪುಟ್ಟಣ್ಣಯ್ಯ

ಗ್ರಾಮ ಪಂಚಾಯತ್ ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಕನ್ನಡ ಭಾಷೆಯಲ್ಲೂ ರೈಲ್ವೆ ಪರೀಕ್ಷೆ ನಡೆಸುವಂತೆ ನಿಖಿಲ್‌ ಕುಮಾರಸ್ವಾಮಿ ಪತ್ರ

Leave a Comment