NEWS

ಭತ್ತದ ಹೈಟೆಕ್ ಕಟಾವು ಯಂತ್ರಗಳ (Hitech Combined Harvestors Paddy) ಕುರಿತಾಗಿ 2 ದಿನಗಳ ತರಬೇತಿ

ಪಾಲನೆ ನ್ಯೂಸ್

ಮಂಡ್ಯ: ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025-26ನೇ ಸಾಲಿನ ತರಬೇತಿಗಳ ಅಂಗವಾಗಿ ಜನವರಿ 2 ಮತ್ತು 3 ಗಳಂದು ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಯುವ ರೈತರಿಗೆ ಭತ್ತದ ಹೈಟೆಕ್ ಕಟಾವು ಯಂತ್ರಗಳ (Hitech Combined Harvestors Paddy) ಕುರಿತಾದ 2 ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ.

ಆಸಕ್ತ ಯುವ ರೈತರು ಜನವರಿ 1 ಒಳಗೆ ನೊಂದಾಣಿ ಮಾಡಬಹುದಾಗುರುತ್ತದೆ. ಈ ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ ಮತ್ತು ಉಳಿದು ಕೊಳ್ಳುವ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸದರಿ ತರಬೇತಿಯು 40 ಯುವ ರೈತರಿಗೆ ಆಯೋಜಿಸಲಾಗಿದ್ದು, ಮೊದಲು ನೋಂದಾಣಿ ಆದವರಿಗೆ ಆದ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:- ರೇಣುಕ.ಹೆಚ್‌ಎಂ -8095969769,  ಸೌಮ್ಯಶ್ರೀ, ಜಿ.ಟಿ – 9113098450 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ನಗರಾಭಿವೃದ್ಧಿ ಇಲಾಖೆ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆ : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆ

ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರನ್ನು ಕಂಡು ಡಿಸಿಎಂ ಡಿಕೆಶಿ ಸಿಡಿಮಿಡಿ

ಹಸಿವು ಮುಕ್ತ ಹಾಗೂ ಜಾತಿ ಮುಕ್ತ ಸಮಾಜದ ವಾತಾವರಣ ನಿರ್ಮಾಣವಾಗಬೇಕು

Leave a Comment