ಪಾಲನೆ ನ್ಯೂಸ್
ಮಂಡ್ಯ: ನ್ಯಾಯಮೂರ್ತಿಗಳಾದ ಶ್ರೀ ಅಭಯ್ ಮನೋಹರ್ ಸಪ್ರೆ, ನಿವೃತ್ತ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ಹಾಗೂ ಅಧ್ಯಕ್ಷರು, ರಸ್ತೆ ಸುರಕ್ಷತಾ ಸುಪ್ರೀಂ ಕೋರ್ಟ್ ಸಲಹಾ ಸಮಿತಿರವರೊಂದಿಗೆ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ರವರಿಂದ ರಾಷ್ಟ್ರೀಯ ಹೆದ್ದಾರಿ-275ರ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ:
ನ್ಯಾಯಮೂರ್ತಿಗಳಾದ ಶ್ರೀ ಅಭಯ್ ಮನೋಹರ್ ಸಪ್ರೆ, ರವರಿಂದ ಸದಸ್ಯರೊಂದಿಗೆ ಇಂದು ರಾಷ್ಟ್ರೀಯ ಹೆದ್ದಾರಿ-275ರ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ನಡೆಸಿದ್ದು. ಈ ಸಂದರ್ಭದಲ್ಲಿ, ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಗಂಭೀರ ರಸ್ತೆ ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಹೆಚ್ಚಿನ ಕ್ರಮಗಳ ಬಗ್ಗೆ ಮಹತ್ವಪೂರ್ಣ ಚರ್ಚೆಗಳನ್ನು ನಡೆಸಲಾಯಿತು.

ಮೊದಲಿಗೆ AI ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿರುವುದನ್ನು ಪರಿಶೀಲಿಸಿ, ಪ್ರಶಂಶಿಸಲಾಯಿತು.
ನಂತರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷತಾ ಸುಧಾರಣೆಗಳನ್ನು ಪಟ್ಟಿ ಮಾಡಲಾಯಿತು.
1) AI ಕ್ಯಾಮೆರಾ ಸ್ಥಿತಿಯ ಪರಿಶೀಲನೆ:
AI ಕ್ಯಾಮೆರಾಗಳ ಸ್ಥಿತಿಯ ಪರಿಶೀಲನೆ ನಡೆಸಿ, ಸುರಕ್ಷತಾ ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನಿಡಲಾಯಿತು ಹಾಗೂ ಸದರಿ ಕ್ಯಾಮೆರಾಗಳು ಸರಾಗವಾಗಿ ಕಾರ್ಯನಿರ್ವಹಿಸಲು ಈ ಡಿವೈಸುಗಳ ತಾಂತ್ರಿಕ ಅಪ್ಡೇಟುಗಳನ್ನು ಮಾಡುತ್ತಿರಬೇಕು.
ಈ ಸಂಬಂಧ ಕೆಳಕಂಡಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
1. ರಾಷ್ಟ್ರೀಯ ಹೆದ್ದಾರಿ-275ರಲ್ಲಿ ವಾಹನದ ಹೆಚ್ಚಿನ ವೇಗವನ್ನು ನಿಯಂತ್ರಿಸಲು ಡಿಜಿಟಲ್ ವೇಗ ನಿಯಂತ್ರಣಗಳನ್ನು ಅಳವಡಿಸುವುದು.
2. ವೇಗ ನಿಯಂತ್ರಣ ಮಾನಿಟರಿಂಗ್ ವ್ಯವಸ್ಥೆಗಳಲ್ಲಿನ ಕ್ರಮಗಳನ್ನು ಕಠಿಣಗೊಳಿಸುವುದು.
3. ಹಲವು ಅಪಘಾತಗಳ ಸಂಭವಿಸುವ ಪ್ರದೇಶಗಳಲ್ಲಿ, ಸಾಕಷ್ಟು ಚುಟುಕು ಮತ್ತು ಸ್ಪಷ್ಟ ಗಾತ್ರದ ಸೂಚನೆ ಫಲಕಗಳನ್ನು ಅಳವಡಿಸುವುದು.
4. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮಾಧ್ಯಮ ಟ್ರೈನಿಂಗ್ ಕಾರ್ಯಕ್ರಮಗಳನ್ನು ನಡೆಸಬೇಕು.
5. ಹೆಚ್ಚಿನ ವೇಗ ತಡೆಗಟ್ಟುವ ನಿಟ್ಟಿನಲ್ಲಿ Road Lane Discipline ಕ್ರಮಗಳನ್ನು ಪಾಲಿಸಬೇಕು.
ಮೇಲ್ಕಂಡ ಪ್ರಯತ್ನಗಳ ಮೂಲಕ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ, ದೇಶದ ಮುಖ್ಯ ರಸ್ತೆಗಳ ಸುರಕ್ಷತೆಯನ್ನು ಉತ್ತಮಗೊಳಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಜಿಲ್ಲಾಧಿಕಾರಿಗಳು, ಮಂಡ್ಯ ಡಾ.ಕುಮಾರ, ಸಾರಿಗೆ ಇಲಾಖೆಯ ಆಯುಕ್ತರು, ಶ್ರೀ ಎ.ಎಂ.ಯೋಗೀಶ್, ಬೆಂಗಳೂರು, ಆರಕ್ಷಕ ಅಧೀಕ್ಷಕರು, ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ, ಹೆಚ್ಚುವರಿ ಆರಕ್ಷಕ ಅಧೀಕ್ಷಕರು, ಶ್ರೀ ತಿಮ್ಮಯ್ಯ ಮಂಡ್ಯ ಹಾಗೂ ಯೋಜನಾ ನಿರ್ದೇಶಕರು ಶ್ರೀ ಎಂ.ಎಸ್.ಒಬಾಲೆ, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಪ್ರಾಧಿಕಾರ, ರಾಮನಗರ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
