NEWS

ಮಾಜಿ ಬ್ಯಾಟ್ಸ್‌ಮನ್ ಸುಬ್ರಮಣಿಯಂ ಬದ್ರಿನಾಥ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ

ಪಾಲನೆ ನ್ಯೂಸ್

ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಅವರು ಸೆಳೆತದಿಂದ ಬಳಲುತ್ತಿದ್ದರು ಮತ್ತು ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದರು. ಎಂಐ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕಲ್ಟನ್ ಅವರಿಗೆ ಸಹಾಯ ಮಾಡಲು ಧಾವಿಸಿದರು. ಆಗ ಮಾಜಿ ಕ್ರಿಕೆಟಿಗ ಸುಬ್ರಮಣಿಯಂ ಬದ್ರಿನಾಥ್, ಪಂದ್ಯದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಸ್ಥಾನದಲ್ಲಿ ನಾನು ಇದ್ದಿದ್ದರೆ, ಕೃನಾಲ್ ಪಾಂಡ್ಯ ಅವರಿಗೆ ನೋವು ಕಾಣಿಸಿಕೊಂಡಾಗ ಸಹಾಯ ಮಾಡಲು ಧಾವಿಸುತ್ತಿರಲಿಲ್ಲ. ಅವರು ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ ಎಂದು ತಮಾಷೆಯಾಗಿ ಹೇಳಿದರು.

ಬದ್ರಿನಾಥ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಆಟಗಾರನ ವಿರುದ್ಧ ಕಿಡಿಕಾರಿದ್ದಾರೆ. ಮುಂಬೈ ತಂಡ ಆರ್‌ಸಿಬಿ ಅಗ್ರ ಕ್ರಮಾಂಕವನ್ನು ಕೆಡವಿದ ನಂತರ, ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 46 ಎಸೆತಗಳಲ್ಲಿ 73 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದರು. ಆದಾಗ್ಯೂ, ಇನಿಂಗ್ಸ್ ಮುಂದುವರೆದಂತೆ, ಕೃನಾಲ್ ಅವರ ಕಾಲಿನಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿತು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್’ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಮುಷ್ಕರ

ಜಪಾನ್‌ನಲ್ಲಿ ಭೂಕಂಪ ಭೀತಿ

Leave a Comment