NEWS

ಜನರ ಪರಿಹಾರದ ಹಣ ಲಪಟಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ

ಪಾಲನೆ ನ್ಯೂಸ್

ಮಂಡ್ಯ: ಅಟ್ರಾಸಿಟಿ ಪ್ರಕರಣದ ಸಂತ್ರಸ್ತರಿಂದ ಹಣ ಲಪಟಾಯಿಸುವ ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಫ್‌ಡಿಎ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಸ್ಸಿಎಸ್ಟಿ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ಥ ರಿಂದ ಸರಕಾರದಿಂದ ಸಿಗುವ ಪರಿಹಾರದ ಹಣ ಲಪಟಾಯಿಸಲು ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಬಿ.ಆನಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪಿರ್ದೇಶಕ ಕಚೇರಿಯ ಎಫ್‌ಡಿಎ ಅಧಿಕಾರಿ ನವೀನ್ ಹುನ್ನಾರ ಹೆಣೆದಿದ್ದಾರೆ ಎಂದರು.

ಈ ಸಂಬಂಧ ಬಿ.ಆನಂದ ಹಾಗೂ ಸಂತ್ರಸ್ಥರ ನಡುವಿನ ಸಂಭಾಷಣೆಯ ದಾಖಲೆ ಕಲೆ ಹಾಕಲಾಗಿದೆ. ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಜಿಲ್ಲಾ ಎಸ್ಸಿಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಸ್ಥಾನ ದಲ್ಲಿ ಬಿ.ಆನಂದ್ ಅವರನ್ನು ಕೈಬಿಡಬೇಕು. ಎಫ್‌ಡಿಎ ಅಧಿಕಾರಿ ನವೀನ್ ಅವರನ್ನು ಸೇವೆಯಿಂದ ಅಮಾನತು ಮಾಡಿ ವಿಚಾರಣೆ ನಡೆಸಬೇಕೆಂದು ಆಗ ್ರಹಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಎಸ್.ಪಿ. ಅಂದಾನಯ್ಯ, ಎಂ.ಕುಮಾರ, ವಿ.ಸಂತೋಷ್ ಇದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಧರ್ಮ ಶಾಶ್ವತವಾದುದು : ಜಗದ್ಗುರು  ವಿದ್ಯುಶೇಖರ ಭಾರತೀ ಸ್ವಾಮೀಜಿ ರವರು ಮಂಡ್ಯ ಕ್ಕೆ ಭೇಟಿ ನೀಡಿ ಆಶೀರ್ವಾಚನ ಮಾಡಿದರು

ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Donald Trump: ಕೊನೆಗೂ ಟ್ರಂಪ್ ಕೈಸೇರಿತು ನೊಬೆಲ್ ಶಾಂತಿ ಪುರಸ್ಕಾರ

Leave a Comment