NEWS

ಮೋತಿ ಯೋಜನೆಗೆ ಚಾಲನೆ

ಪಾಲನೆ ನ್ಯೂಸ್

ಬೆಂಗಳೂರು: ಬೀದಿ ನಾಯಿಗಳನ್ನು ಸಾರ್ವಜನಿಕರು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ನಗರ ಪಾಲಿಕೆ ಆರಂಭಿಸಿರುವ ‘ಮೋತಿ’ ಕಾರ್ಯಕ್ರಮಕ್ಕೆ ಭಾನುವಾರ ಕಬ್ಬನ್‌ ಪಾರ್ಕ್‌ನಲ್ಲಿ ಚಾಲನೆ ನೀಡಲಾಯಿತು. ಬೀದಿ ನಾಯಿಗಳಿಗೆ ಕುಡಿಯಲು ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಆಯುಕ್ತ ದಲ್ಟಿತ್ ಕುಮಾ‌ರ್, ಬೀದಿ ನಾಯಿಗಳಿಗೆ ಬಾಯಾರಿಕೆಯಾ ದಾಗ ಕೇಳಲು ಮನುಷ್ಯನಂತೆ ಮಾತು ಬರುವುದಿಲ್ಲ.

ಹೀಗಾಗಿ, ತಮ್ಮ ಮನೆಯ ಆವರಣದಲ್ಲಿ ಹಾಗೂ ನಿಗದಿತ ಸ್ಥಳಗಳಲ್ಲಿನಾಯಿಗಳ ಬಾಯಾರಿಕೆನೀಗಿಸಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಬೇಕು. ಬೀದಿ ನಾಯಿಗಳನ್ನು ಸಾರ್ವಜನಿಕರುದತ್ತು ಪಡೆಯುವಂತೆ ಕೋರಿದರು. ಇದೇವೇಳೆಮಕ್ಕಳಿಗಾಗಿ ಆಯೋಜಿಸಿದ್ದ ಪೇಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಸಾರ್ವಜನಿಕರು ನಾಲ್ಕುನಾಯಿಗಳನ್ನು ದತ್ತು ಪಡೆದರು. ನಾಯಿಗಳಿಗೆ ಲಸಿಕೆ ಹಾಕಿ, ಆಹಾರ ಕಿಟ್, ಚೈನ್‌ ಮತ್ತು ವಾಟ‌ರ್ ಬೌಲ್‌ಗಳನ್ನು ವಿತರಿಸಲಾಯಿತು.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆ – 3 ರ ಮೌಲ್ಯ ಮಾಪನ ಕೇಂದ್ರಕ್ಕೆ ಜಿ.ಪಂ. ಸಿಇಓ ಅನಿರೀಕ್ಷಿತ ಭೇಟಿ

ಗ್ರಾಮೀಣ ಮಹಿಳೆಯರಿಗೆ 10 ದಿನ ಅಣಬೆ ಕೃಷಿ ತರಬೇತಿ

ಗೃಹ ಬಳಕೆ ಗ್ರಾಹಕರಲ್ಲಿ ಸಚಿವರ ಮನವಿ

Leave a Comment