NEWS

ಚೆನ್ನೈ ಹಾಗೂ ಮುಂಬೈ 2ನೇ ಬಾರಿ ಮುಖಾಮುಖಿ

ಪಾಲನೆ ನ್ಯೂಸ್

ಚೆನ್ನೈ: ತಲಾ 5 ಬಾರಿ ಚಾಂಪಿಯನ್ ಚೆನ್ನೈ ಹಾಗೂ ಮುಂಬೈ ತಂಡಗಳು ಈ ಬಾರಿ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಮಾಡು ಇಲ್ಲ ಮಡಿ ಸ್ಥಿತಿಯಲ್ಲಿವೆ. ಶನಿವಾರ ಈ 2 ತಂಡ ಗಳು 2ನೇ ಬಾರಿ ಮುಖಾಮುಖಿಯಾಗುತ್ತಿದ್ದು, ಅಳಿವು ಉಳಿವಿನ ಪ್ರಶ್ನೆಯಾಗಿದೆ. ಚೆನ್ನೈ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದಿದೆ. ಮುಂಬೈ ಆಡಿರುವ 8 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಜಯಗಳಿಸಿದೆ.

ಇತ್ತೀಚೆಗಷ್ಟೇ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಸೋತಿದ್ದ ಮುಂಬೈ ತಂಡ ಈಗ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಚೆನ್ನೈ ತಂಡದ ಪರ ಸಂಜು ಸ್ಯಾನ್ ಮಿಂಚುತ್ತಿದ್ದರೂ ನಾಯಕ ಋತುರಾಜ್ ಸೇರಿದಂತೆ ಇತರರು ಕೈಕೊಡುತ್ತಿದ್ದಾರೆ. ಸ್ಪಿನ್ನರ್‌ಗಳಾದ ನೂರ್ ಅಹ್ಮದ್, ಅಕೇಲ್ ಹೊಸೈನ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಅತ್ತ ಮುಂಬೈ ತಂಡ ತಾರಾ ಕ್ರಿಕೆಟಿಗರ ಅಸ್ಥಿರ ಆಟದಿಂದಾಗಿ ಹಿನ್ನಡೆ ಅನುಭವಿಸುತ್ತಿದೆ. ಹಾರ್ದಿಕ್, ಬೂಮ್ರಾ, ಸೂರ್ಯಕುಮಾ‌ರ್ ಅಬ್ಬರಿಸಬೇಕಾದ ಅಗತ್ಯವಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕ

ಮಾದಪ್ಪನ ಬೆಟ್ಟಕ್ಕೆ ಕಾವೇರಿ ದಾಟಿ ಪಾದಯಾತ್ರೆ ಬಂದ ಭಕ್ತ ಸಾಗರ

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಆಧುನಿಕ ಔಷಧಿಗಳನ್ನು ತ್ಯಜಿಸಿ

Leave a Comment