ಪಾಲನೆ ನ್ಯೂಸ್
ನವದೆಹಲಿ: ಹೆಚ್ಚುತ್ತಿರುವ ಇಂಧನ ದರವನ್ನು ಜನರ ಮೇಲೇ ವರ್ಗಾವಣೆ ಮಾಡುವುದು “ಅನಿವಾರ್ಯ” ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ನವದೆಹಲಿಯಲ್ಲಿ ಬುಧವಾರ ಬಿಡುಗಡೆಗೊಂಡ ಮಾಸಿಕ ಆರ್ಥಿಕ ಪರಿಶೀಲನೆಯಲ್ಲಿ, ಹೆಚ್ಚಿದ ಇಂಧನದ ಬೆಲೆಗಳನ್ನು ಜನರು ಮತ್ತು ಉದ್ಯಮಗಳಿಗೆ ವರ್ಗಾಯಿಸುವುದು ತಪ್ಪಿಸಲಾಗದ ಕ್ರಮ ಎಂದು ಹೇಳಿದೆ. ಕೆಲವು ದೇಶಗಳು ಈಗಾಗಲೇ ಈ ಹೆಚ್ಚಿದ ವೆಚ್ಚವನ್ನು ನೇರವಾಗಿ ಬಳಕೆದಾರರ ಮೇಲೆ ಹೇರುವುದನ್ನು ಪ್ರಾರಂಭಿಸಿವೆ, ಇನ್ನೂ ಕೆಲವು ದೇಶಗಳು ಅದನ್ನು ಮುಂದೂಡುತ್ತಿವೆ. ಆದರೆ, ಪೂರೈಕೆ ವ್ಯತ್ಯಯದ ಸಂದರ್ಭಗಳಲ್ಲಿ ಬೇಡಿಕೆ ನಿಯಂತ್ರಣ ಅಗತ್ಯವಾಗಿದೆ. ಇಲ್ಲದಿದ್ದರೆ ಇಂಧನಕ್ಕಾಗಿ ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಇದೇ ವೇಳೆ ಸ್ಥೂಲ ಆರ್ಥಿಕ ಸ್ಥಿರತೆ ಅಗತ್ಯತೆಯನ್ನು ಒತ್ತಿ ಹೇಳಿದ ಸಚಿವಾಲಯ, ತಾತ್ಕಾಲಿಕ ಬೆಳವಣಿಗೆಯನ್ನು ಉತ್ತೇಜಿಸಲು ತೆಗೆದುಕೊಳ್ಳುವ ಕ್ರಮಗಳು ಮಧ್ಯ ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಹಾನಿ ಉಂಟುಮಾಡಬಹುದು ಎಂದು ಎಚ್ಚರಿಸಿದೆ.ಇಂಧನ ಪೂರೈಕೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು ಸಮಯ ಬೇಕಾಗುವ ಕಾರಣ, ಹೆಚ್ಚಿನ ಬೆಲೆಗಳ ಭಾರವನ್ನು ಜನರೇ ಭರಿಸಬೇಕಾಗುತ್ತದೆ ಎಂಬ ತಿಳಿಸಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
