NEWS

240ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕೇಬಲ್‌ ಕತ್ತರಿಸಿ ಇಬ್ಬರು ಮಾಜಿ ಕೆಲಸಗಾರರು

ಪಾಲನೆ ನ್ಯೂಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ವೇಳೆ 240ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕೇಬಲ್‌ ಕತ್ತರಿಸಿ ಭದ್ರತೆಗೆ ಅಡ್ಡಿಪಡಿಸಿದ್ದ ಇಬ್ಬರು ಮಾಜಿ ಕೆಲಸಗಾರರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಮಂಜುನಾಥ್ (37), ಉತ್ತರಪ್ರದೇಶ ಮೂಲದ ಅಬ್ದುಲ್ ಕಲಾಂ (19) ಬಂಧಿತ ಆರೋಪಿಗಳು. ಏ.24ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ ನಡುವಿನ ಪಂದ್ಯ ಪ್ರಾರಂಭಕ್ಕೂ ಮೊದಲೇ ಸಿಸಿ ಕ್ಯಾಮರಾ ಕೇಬಲ್ ಕಟ್ ಮಾಡಿದ್ದರು. ಐಪಿಎಲ್ ಪಂದ್ಯ ವೇಳೆ ಸಿಸಿ ಕ್ಯಾಮರಾ ವೈರ್ ಕಡಿತ ಪ್ರಕರಣ ಕ್ರೀಡಾಂಗಣದ ಎಲ್ಲ ಪ್ರವೇಶ ದ್ವಾರಗಳು, ಸುತ್ತಮುತ್ತಲಿನ ಕ್ಯಾಮರಾಗಳು, ಡಿ ಕಾರ್ಪೊರೇಟ್ ಸ್ಟ್ಯಾಂಡ್ ಮತ್ತು ಎಲ್ಲ ಕಾಸ್ಕೋರ್ಸ್ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು.

ಇದಲ್ಲದೆ ಎನ್‌ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿ ಇಡೀ ಭದ್ರತಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ್ದರು. ಪಂದ್ಯದ ಸಂಜೆಯ ಹೊತ್ತಿಗೆ ಏಕಾಏಕಿ ಸಿಸಿ ಕ್ಯಾಮರಾ ಫೀಡ್ ಸ್ಥಗಿತಗೊಂಡಾಗ ಭದ್ರತಾ ನಿಯಂತ್ರಣ ಕೊಠಡಿಯಲ್ಲಿದ್ದ ಪೊಲೀಸರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಸಾವಿರಾರು ಪ್ರೇಕ್ಷಕರು ಸೇರುವ ಹೈ-ವೋಲ್ವೇಜ್ ಪಂದ್ಯದ ವೇಳೆ ಇದು ಯಾವುದೋ ದೊಡ್ಡ ಸಂಚಿನ ಭಾಗವಿರಬಹುದು ಎಂದು ಶಂಕಿಸಲಾಗಿತ್ತು.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಕಬ್ಬಿನ ಹಣವನ್ನು ಪಾವತಿ ಮಾಡಲು ಸೂಚನೆ

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ಗೆ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

ಪಾಂಡವಪುರ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ

Leave a Comment