ಪಾಲನೆ ನ್ಯೂಸ್
ಕೆ.ಆರ್.ನಗರ: ಬಿರುಬಿಸಿಲಿನ ಝಳಕ್ಕೆ ಭತ್ತದ ನಾಡು ಕಾದ ಕಾವಲಿಯಂತಾಗಿದ್ದು, ಕಾವೇರಿ ನದಿಯಲ್ಲಿ ಬಂಡೆಗಲ್ಲುಗಳೇ ಕಾಣಿಸುತ್ತಿವೆ.
ಕಾವೇರಿ ನದಿ ನಾಡಿನ ಜೀವನದಿ ಯಾಗಿದೆ. ಆದರೆ, ಮಳೆ ಕೊರತೆ ಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕ್ಷೀಣಿಸಿದೆ.
ಸಾಲಿಗ್ರಾಮ ತಾಲ್ಲೂಕಿನ ಕರ್ತಾಳು ಗ್ರಾಮದಿಂದ ಆರಂಭವಾಗಿ ಕೆ.ಆರ್. ಎಸ್. ಜಲಾಶಯದವರೆಗೆ ಕಾವೇರಿ ನದಿ ಕಾಲುವೆ ರೀತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದೆ. ಸಣ್ಣ ಸಣ್ಣ ಹಳ್ಳಗಳು ಬತ್ತಿರುವುದು ಕಾವೇರಿ ನದಿಯ ಹರಿವು ಕ್ಷೀಣಿಸಲು ಕಾರಣವಾಗಿದೆ. ಭತ್ತದ ನಾಡು ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಹರಿ ಯುವ ಜೀವನದಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಬರೀ ಕಲ್ಲುಬಂಡೆಗಳೇ ಕಾಣುತ್ತಿವೆ.ಮಳೆಯಾಗದಿದ್ದರೆ ಬರ ಮತ್ತು ಬೇಸಿಗೆ ಯನ್ನು ಹೇಗೆ ಎದುರಿಸಬೇಕೆಂಬುದು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ತಾಪಮಾನ ಏರಿಕೆ: ಮಳೆಯಅಭಾವ, ನೆತ್ತಿ ಸುಡುವ ಬಿಸಿಲಿನಿಂದ ಭತ್ತದ ನಾಡು ಬಳಲಿದೆ. ಜಾನುವಾರು ಗಳು ನೀರು ಹಾಗೂ ಮೇವಿನ ಕೊರತೆ ಎದುರಿಸುತ್ತಿವೆ. ನಾನೋ ಬಿಸಿಲಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈಗಾಗಲೇ ಈ ಭಾಗದಲ್ಲಿ ಕುಡಿ ಯುವ ನೀರಿಗೆ ಪರದಾಡುವ ಸ್ಥಿತಿ ಎದು ರಾಗಿದೆ. ಅಲ್ಲದೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿ ಸಂಕುಲಕ್ಕೆ ಜೀವಜಲ ದೊರಕದಿದ್ದರೆ ಹೇಗೆ? ಎಂಬ ಚಿಂತೆ ಎದುರಾಗಿದೆ.

ಜಾನುವಾರುಗಳಿಗೆ ಮತ್ತು ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಯಲ್ಲಿ ಸ್ಥಳೀಯ ಸಂಸ್ಥೆಗಳು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿ ದ್ದರೂ ಮುಂದಿನ ಮೇ ತಿಂಗಳೊಳಗೆ ಹೈನುಗಾರಿಕೆ ಮಾಡುವ ರೈತರು ಹಸಿರು ಮೇವುಗಾಗಿ ಪರದಾಡುತ್ತಿದ್ದಾರೆ. ಮೆಕ್ಕೆ ಜೋಳ ಟನ್‌ಗೆ 3 ಸಾವಿರ ರೂ. ನಿಂದ ಮೂರೂವರೆ ಸಾವಿರ ರೂ. ದಾಟಿದೆ. ಕೆ. ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಕೆಲವು ಗ್ರಾಮಗಳಿಂದ ನೇರವಾಗಿ ಚರಂಡಿಯ ತ್ಯಾಜ್ಯ ನೀರು ಹರಿದು ಕಾವೇರಿ ನದಿಗೆ ಸೇರುತ್ತಿದೆ. ಇದೇ ರೀತಿ ಕೆ.ಆರ್.ನಗರದ ತ್ಯಾಜ್ಯ ನೀರು ಕಾಲುವೆ ಮೂಲಕ ಸೇರುತ್ತಿದ್ದು, ನದಿ ಕಲುಷಿತಗೊಳ್ಳುವ ಆತಂಕ ಎದುರಾಗಿದೆ.
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
