NEWS

ಕೋಚ್ ನವಲ್ ಕಿರುಕುಳ, ನಿಂದನೆ ಎಂದು ನೀರಜ್ ಚೋಪ್ರಾ, ಸುಮಿತ್ ಅಂತಿಲ್‌ ದೂರು

ಪಾಲನೆ ನ್ಯೂಸ್

ನವದೆಹಲಿ: ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಪ್ಯಾರಾಲಿಂಪಿಕ್ ಚಾಂಪಿಯನ್ ಸುಮಿತ್ ಅಂತಿಲ್ ಅವರು ದೌಣಾಚಾರ್ಯ ಪುರಸ್ಕೃತ ಕೋಚ್ ನವಲ್ ಸಿಂಗ್ ವಿರುದ್ಧ ಮಾನಸಿಕ ಕಿರುಕುಳ ಮತ್ತು ನಿಂದನೆ ಆರೋಪ ಮಾಡಿದ್ದಾರೆ.

ಈ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ‘ಕೋಚ್ ನವಲ್ ಸಿಂಗ್ ನಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನಮ್ಮ ಕುಟುಂಬಗಳ ಮೇಲೆಯೂ ದೌರ್ಜನ್ಯ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನೀರಜ್ ಚೋಪ್ರಾ ಹಾಗೂ ಅಂತಿಲ್ ಆರೋಪಿ ಸಿದ್ದು, ಕ್ರೀಡಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅವರಿಂದ ಬಂದ ದೂರನ್ನು ಸ್ವೀಕರಿಸಿದ್ದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಖಚಿತಪಡಿಸಿದೆ. ಆದರೆ ನವಲ್ ತಮ್ಮ ಉದ್ಯೋಗಿಯಲ್ಲ. ಭಾರತೀಯ ಅಥ್ಲೆಟಿಕ್ಸ್‌ ಫೆಡರೇ ಶನ್‌ನಿಂದ ನೇಮಕ ಗೊಂಡಿರುವವರು ಎಂದು ಪ್ರಾಧಿಕಾರ ತಿಳಿಸಿದೆ. ಕೋಚ್ ನವಲ್ ಸಿಂಗ್ ಸದ್ಯ ಸಚಿನ್ ಯಾದವ್‌ಗೆ ತರಬೇತಿ ನೀಡುತ್ತಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆಗಳು, ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ಡಾ.ಕುಮಾರ

ಭಾರತಕ್ಕೆ ಸೌರಶಕ್ತಿ ಶಾಕ್ ನೀಡಿದ ಟ್ರಂಪ್‌

ಮೈಷುಗರ್ ಖಾಸಗೀಕರಣಕ್ಕೆ ತನಿಖಾ ಸಮಿತಿ ರಚನೆ: ಸುನಂದಾ ಜಯರಾಂ

Leave a Comment