NEWS

ಪಾಕ್‌ಗೆ ₹46 ಸಾವಿರ ಕೋಟಿ ನೆರವು ನೀಡಿದ ಸೌದಿ, ಕತಾರ್‌

ಪಾಲನೆ ನ್ಯೂಸ್

ಇಸ್ಲಾಮಾಬಾದ್‌: ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಸೌದಿ, ಕತಾರ್‌ನಿಂದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಮತ್ತು ಕತಾರ್ 5 ಬಿಲಿಯನ್ ಡಾಲರ್ (46,500 ಕೋಟಿ ರೂ.) ಆರ್ಥಿಕ ನೆರವು ನೀಡಲಿವೆ. ಈ ತಿಂಗಳು ಯುನೈಟೆಡ್ ಅರಬ್ 3.5 ಬಿಲಿಯನ್ (32,500 ರೂ.) ಸಾಲವನ್ನು ಮರುಪಾವತಿ ಮಾಡಬೇಕಾಗಿದ್ದು, ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಸೌದಿ ಮತ್ತು ಕತಾರ್ ನೆರವಿನಿಂದಾಗಿ ಪಾಕಿಸ್ತಾನ ಸಂಕಷ್ಟದಿಂದ ಪಾರಾಗಲಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಇಂದು ವಾಷಿಂಗ್ಟನ್‌ಗೆ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.ಸೌದಿ ಅರೇಬಿಯಾ, ಚೀನಾ ಮತ್ತು ಯುಎಇ ರಾಷ್ಟ್ರಗಳು ಪಾಕಿಸ್ತಾನದ ಪ್ರಮುಖ ಸಾಲದಾತರಾಗಿದ್ದು, ಯುಎಇ ಸ್ಥಾನವನ್ನು ಕತಾರ್ ತುಂಬುವ ಸಾಧ್ಯತೆ ಇದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪ್ರಸಿದ್ಧ ಗಾಯಕಿ ಆಶಾ ಭೋಸ್ಥೆ ನಿಧನ

ಭತ್ತದ ಹೈಟೆಕ್ ಕಟಾವು ಯಂತ್ರಗಳ (Hitech Combined Harvestors Paddy) ಕುರಿತಾಗಿ 2 ದಿನಗಳ ತರಬೇತಿ

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್

Leave a Comment