NEWS

ಪ್ರತಿಭಾಂಜಲಿ ಆಯೋಜಿಸಿರುವ ಕಾವೆಂಶ್ರೀ ಕಾವ್ಯಯಾನ ಸಂಗೀತ ಸುಧೆ ಫೆ.14ಕ್ಕೆ

ಸಾಂಸ್ಕೃತಿಕ ನಾಯಕ ಕೆ.ಎಸ್. ಸಚ್ಚಿದಾನಂದ ಅವರ ಸವಿನೆನಪಿನ ಕಾರ್ಯಕ್ರಮ

ಪಾಲನೆ ನ್ಯೂಸ್
ಮಂಡ್ಯ: ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯು ಸಾಂಸ್ಕೃತಿಕ ನಾಯಕ ಕೆ.ಎಸ್. ಸಚ್ಚಿದಾನಂದ ಅವರ ಸವಿನೆನಪಿನಲ್ಲಿ ಆಯೋಜಿಸಿರುವ ಸಂಜೆರಂಗಿನ ಸಂಗೀತ ಸುಧೆ ‘ಕಾವೆಂಶ್ರೀ ಕಾವ್ಯಯಾನ’ ಕಾರ್ಯಕ್ರಮವನ್ನು ಅಕಾಡೆಮಿಯ 25ನೇ ವರ್ಷಾಚರಣೆ ಸಂದರ್ಭದಲ್ಲಿ ಏಪ್ರಿಲ್ 14, ಮಂಗಳವಾರ ಸಂಜೆ 4.30 ಕ್ಕೆ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಕೆ.ಎಸ್. ವಿಜಯ್ ಆನಂದ್  ಕಾರ್ಯಕ್ರಮ ಉದ್ಘಾಟಸಲಿದ್ದು, ಕರ್ನಾಟಕ ಸುಗಮ ಸಂಗೀತ ಅಕಾಡೆಮಿ ಮೈಸೂರು ಜಿಲ್ಲಾಧ್ಯಕ್ಷರಾದ ಡಾ. ನಾಗರಾಜ್ ವಿ. ಭೈರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ನಾಡಿನ ಪ್ರಸಿದ್ಧ ಕವಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಗೌರವ ಉಪಸ್ಥಿತಿಯಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷರಾದ ಡೇವಿಡ್‌ ಪ್ರತಿಭಾಂಜಲಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ಪರಿಚಾರಕ ಕೆ.ಟಿ. ಹನುಮಂತು, ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಶಾಂತಮ್ಮ ಎಂ., ಶಿಕ್ಷಣ ತಜ್ಞೆ, ಲೇಖಕಿ, ಕವಯಿತ್ರಿ ಹೆಚ್.ಆರ್. ಕನ್ನಿಕ ಭಾಗವಹಿಸಲಿದ್ದಾರೆ.

Related posts

ಬೇಸಿಗೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗಬಾರದು

ಬಾಲ್ಯ ವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ

ಎಲ್ಲ ರಾಜ್ಯಕ್ಕೂ ಶೇ.50 ಸ್ಥಾನ ಹೆಚ್ಚಳ ನಿಶ್ಚಿತ | ಕರ್ನಾಟಕಕ್ಕೆ 42 ಲೋಕಸಭಾ ಕ್ಷೇತ್ರ!

Leave a Comment