NEWS

ಪ್ರಸಿದ್ಧ ಗಾಯಕಿ ಆಶಾ ಭೋಸ್ಥೆ ನಿಧನ

ಪಾಲನೆ ನ್ಯೂಸ್

ಮುಂಬೈ: ಪ್ರಸಿದ್ಧ ಗಾಯಕಿ ಆಶಾ ಭೋಸೆ ಭಾನುವಾರ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯ ಸ್ಸಾಗಿತ್ತು. ಅನಾರೋಗ್ಯದಿಂದಾಗಿ ಏ.11 ರಂದು ಅವರನ್ನು ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಹಿರಿಯ ಗಾಯಕಿ ಬಹು ಆರೋಗ್ಯ ಸಮಸ್ಯೆಗಳನ್ನು ಎದುರಿಸು ತ್ತಿದ್ದರು ಮತ್ತು ಅಂಗಾಂಗ ವೈಫಲ್ಯದಿಂದಾಗಿ ನಿಧನರಾದರು ಎಂದು ವೈದ್ಯರಾದ ಪ್ರತೀತ್ ಸಮದಾನಿ ದೃಢಪಡಿಸಿದರು. ಸೋಮವಾರ ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾಕ್ ್ರನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಎಂಟು ದಶಕಗಳ ವೃತ್ತಿ ಜೀವನ: ಪಿಯಾ ತು ಅಬ್ ತೋ ಆಜಾ, ಕಜ್ರಾ ಮೊಹಬ್ಬತ್ ವಾಲಾ, ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಎಂಬ ಪ್ರಸಿದ್ದ ಹಾಡುಗಳ ಮೂಲಕ ಹೆಸರುವಾಸಿಯಾದ ಆಶಾ ಭೋಸ್ಥೆ ಅವರು ಈ ವರ್ಷದ ಸೆ.8ರಂದು 93ನೇ ವಯಸ್ಸನ್ನು ಪೂರ್ಣಗೊಳಿಸಬೇಕಾಗಿತ್ತು. ಹಾಡುಗಳನ್ನು ಕೇಳುತ್ತ ಬೆಳೆದ ಅನೇಕ ಸಂಗೀತ ಪ್ರಿಯರ ಮನಗಳಲ್ಲಿ ಆಘಾತ ಉಂಟುಮಾಡಿದೆ. ಆಶಾ ಭೋಸ್ಥೆ ಅವರು ಕೇವಲ 10ನೇ ವಯಸ್ಸಿನಲ್ಲಿ 1943ರ ಮರಾಠಿ ಚಿತ್ರ ‘ಮಾಜಾ ಬಾಲ್’ಗಾಗಿ ‘ಚಲಾ ಚಲಾ ನವ ಬಾಲಾ’ ಎಂಬ ತಮ್ಮ ಮೊದಲ ಚಲನಚಿತ್ರ ಗೀತೆಯನ್ನು ಹಾಡಿದ್ದರು.

ಆರಂಭದಲ್ಲಿ ಓ ಹಸೀನಾ ಜುಲ್ಲೋನವಾಲಿಯಂತಹ ನೃತ್ಯ ಗೀತೆಗಳಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿದ್ದ ಅವರು, ನಂತರ ‘ದಿಲ್ ಚೀಜ್ ಕ್ಯಾ ಹೈ’ ಎಂಬ ಘಜಲ್‌ಗಳು ಹಾಗೂ ‘ತೋರಾ ಮನ ದರ್ಪಣ ಕಹಲಾಯೆ’ಯಂತಹ ಶಾಸ್ತ್ರೀಯ ಗೀತೆಗಳ ಮೂಲಕ ತಮ್ಮ ಗಾನ ಸಾಮರ್ಥ್ಯದ ಆಳವನ್ನು ಸಾಬೀತುಪಡಿಸಿದರು. ಆಶಾ ಭೋಸ್ಥೆಯವರ ನಿಧನಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಬಾಲಿವುಡ್ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಹವಾಮಾನ ಒಪ್ಪಂದ ಸೇರಿ 66 ಅಂತರರಾಷ್ಟ್ರೀಯ ಒಡಂಬಡಿಕೆಗಳಿಂದ ಹೊರನಡೆದ ಅಮೆರಿಕ

ಕಂದಾಯ ಇಲಾಖೆಯಲ್ಲಿ ನೌಕರರು ಒಕ್ಕೊರಲನಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಒಳ್ಳೆಯ ಸಾಧನೆ ಮಾಡಬಹುದು: ಡಾ.ಕುಮಾರ

ಪೋಷಕರ ವಿರೋಧದ ನಡುವೆಯೂ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ

Leave a Comment