NEWS

ಸುನಿತಾ ವಿಲಿಯಮ್ಸ್ ಭಾರತಕ್ಕೆ ಭೇಟಿ

ಕಲ್ಪನಾ ಚಾವ್ಹಾ ತಾಯಿ ಮಾತುಕತೆ : ಸಂವಾದ ಕಾರ್ಯಕ್ರಮದಲ್ಲೂ ಭಾಗಿ

ಪಾಲನೆ ನ್ಯೂಸ್

ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭಾರತ ಪ್ರವಾಸದಲ್ಲಿರುವಾಗಲೇ ನಾಸಾದಿಂದ ನಿವೃತ್ತರಾಗಿದ್ದಾರೆ. ಅವರು ತಮ್ಮ ಭಾರತ ಭೇಟಿ ವೇಳೆ ನಾಸಾದ ಗಗನಯಾತ್ರಿ ಕಲ್ಪನಾ ಚಾಸ್ಲಾ ಅವರ ತಾಯಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

2003ರ ಫೆಬ್ರವರಿಯಲ್ಲಿ ನಾಸಾದ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾ 7 ಗಗನಯಾತ್ರಿಗಳು ಕೊಲಂಬಿಯಾ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದರು. ಯಾತ್ರೆ ಬಳಿಕ ಭೂಮಿಯ ವಾತಾವರಣ ಪ್ರವೇಶಿಸುವಾಗ ಕೊಲಂಬಿಯಾ ನೌಕೆ ಛಿದ್ರಗೊಂಡು ಅದರಲ್ಲಿದ್ದವರೆಲ್ಲಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸುನಿತಾ ವಿಲಿಯಮ್ಸ್ ದೆಹಲಿಯಲ್ಲಿರುವ ಕಲ್ಪನಾ ಚಾವ್ಲಾ ಅವರ ತಾಯಿ ಸನ್ನೋಗಿತಾ ಚಾವ್ಲಾ ಮತ್ತು ಸಹೋದರಿ ದೀಪಾರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸುನಿತಾ ಭೇಟಿ ಕುರಿತು ಮಾತನಾಡಿದ ಸನ್ಯೋಗಿತ ‘ಕೊಲಂಬಿಯಾ ದುರಂತದ ಬಳಿಕ ಸುನಿತಾ 3 ತಿಂಗಳು ಪ್ರತಿ ದಿನ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದರು. ಸುನಿತಾ ಮತ್ತು ಕಲ್ಪನಾ ಇಬ್ಬರೂ ಪರಸ್ಪರರನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಸುನಿತಾ ವಿಲಿಯಮ್ಸ್ ಅವರ ತಂದೆ ಗುಜರಾತ್ ಮೂಲದ ದೀಪಕ್ ಪಾಂಡ್ಯ ಮತ್ತು ತಾಯಿ ಸ್ಟೋವೇನಿಯಾ ಮೂಲದ ಉರ್ಸುಲಿನ್ ಬೋನಿ ಪಾಂಡ್ಯ. ಈ ಹಿನ್ನೆಲೆಯಲ್ಲಿ ಅವರು ನನ್ನ ತಂದೆ ಜನಿಸಿದ ದೇಶವಾದ ಭಾರತಕ್ಕೆ ಬಂದಿರುವುದು ಮರಳಿ ಮನೆಗೆ ಬಂದಂತೆ ಭಾಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಐಟಿಯಲ್ಲಿ ಸಂವಾದ

ಸುನಿತಾ ವಿಲಿಯಮ್ಸ್ ದೆಹಲಿಯ ಐಐಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ‘ಪ್ರಸ್ತುತ ಬಾಹ್ಯಾಕಾಶ ಯೋಜನೆಗಳು ಸಾಕಷ್ಟು ರೋಮಾಂಚನ ಕಾರಿಯಾಗಿವೆ. ಪ್ರತಿಯೊಂದು ಹೊಸ ಯೋಜನೆಗಳೂ ಸಾಕಷ್ಟು ಏರಿಳಿತಗಳನ್ನು ಹೊಂದಿರುತ್ತವೆ. ಆದರೆ ಇದರಿಂದ ಆಗುವ ಕಲಿಕೆ ನಮ್ಮನ್ನು ಭವಿಷ್ಯದ ಯೋಜನೆಗಳಿಗೆ ಸಿದ್ಧಪಡಿಸುತ್ತದೆ ಎಂದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಯುವ ಜನತೆಗೆ ಕಾನೂನಿನ ಜ್ಞಾನ ಬಹಳ ಮುಖ್ಯ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು – ಹೆಚ್. ಶಶಿಧರ ಶೆಟ್ಟಿ

ಮಳವಳ್ಳಿ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪ್ರಜಾಸೌಧದ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ  ಮಳವಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಏ.1ರಂದು ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿ ಉದ್ಯೋಗ ಮೇಳ

Leave a Comment