ಪಾಲನೆ ನ್ಯೂಸ್
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಕೇರಳದ ಶ್ರೀನಂದಾ ಶವವಾಗಿ ಪತ್ತೆ
3 ದಿನಗಳ ಸತತ ಕಾರ್ಯಾಚರಣೆ: 2,000 ಅಡಿ ಪ್ರಪಾತದಲ್ಲಿ ಸಿಕ್ಕಿದ ಮೃತದೇಹ ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ (15) ಶವವಾಗಿ ಪತ್ತೆಯಾಗಿದ್ದಾರೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಈಕೆ ನಾಪತ್ತೆಯಾಗಿ ದ್ದರು. 2,000 ಅಡಿ ಆಳದ ಮಾಣಿಕ್ಯಧಾರಾ ದಲ್ಲಿ ಶ್ರೀನಂದಾ ಮೃತ ದೇಹ ಪತ್ತೆಯಾಗಿದೆ.
ಕೇರಳದ ಪಾಲಕ್ಕಾಡ್ ಮೂಲದ ನಾಪತ್ತೆಯಾಗಿ ಮೂರು ದಿನಗಳಾಗಿತ್ತು. ಶ್ರೀನಂದಾ ಮಂಗಳವಾರ ಸಂಜೆ ಮಾಣಿಕ್ಯಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಕಣ್ಮರೆಯಾಗಿದ್ದಳು. ಕುಟುಂಬದ 41 ಮಂದಿ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆ ಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್‌ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಜನ ದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆ ಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಬಾಲಕಿ ನಾಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆ ರಕ್ಷಣಾ ತಂಡಗಳು ಥರ್ಮಲ್ ಡೋನ್ ಮೂಲಕ ಹುಡುಕಾಟ ನಡೆಸಿದ್ದವು. ‘ಚಾರಣಿಗರ ಮೊಬೈಲ್‌ಗೆ ಆ್ಯಪ್’ ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಆ್ಯಪ್ ಮಾದರಿಯಲ್ಲಿಯೇ ಚಾರಣದ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್‌ನಲ್ಲಿ ಆ್ಯಪ್ ಅಳವಡಿಸಿದರೆ, ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧಕಾರ್ಯ ಸುಲಭವಾಗುತ್ತದೆ. ಹೀಗಾಗಿ ಆ್ಯಪ್ ಅಭಿವೃದ್ಧಿಗೆ ಕ್ರಮವಹಿಸುವಂತೆ ಮತ್ತು ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ನೇಚರ್ ಗೈಡ್ ಗಳಿಗೆ ಕಡ್ಡಾಯವಾಗಿ ವೈರೈಸ್ ಸೆಟ್ ನೀಡಬೇಕು. ಟ್ರೆಕ್ಟರ್‌ಗಳ ಸುರಕ್ಷತೆಯಲ್ಲಿ ಗೈಡ್‌ಗಳು, ಟ್ರೆಕ್ಕರ್‌ಗಳು ಮತ್ತು ಅರಣ್ಯ ಇಲಾಖೆ ಎಲ್ಲರೂ ಜವಾಬ್ದಾರರಾಗಿರಬೇಕು ಎಂದು ಹೇಳಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
