ಪಾಲನೆ ನ್ಯೂಸ್
ನವದೆಹಲಿ: ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಮತ್ತು ಸಹಜಾ ಯಮಲಪಲ್ಲಿ ಸಿಂಗಲ್ಸ್ ವಿಭಾಗದಲ್ಲಿ ದಾಖಲಿಸಿದ ನೇರಸೆಟ್ ಗೆಲುವಿನ ಬಲದಿಂದ ಆತಿಥೇಯ ಭಾರತ ತಂಡ ಬಿಲ್ಲಿ ಜೀನ್ ಕಿಂಗ್ (ಬಿಜೆಕೆ) ಕಪ್ ಮಹಿಳಾ ಟೆನಿಸ್ ಟೂರ್ನಿಯ ಏಷ್ಯಾ-ಓಶಿಯಾನಿಯಾ ಗ್ರೂಪ್-1ರ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-0 ಅಂತರದಿಂದ ಜಯ ದಾಖಲಿಸಿದೆ. ವೈಷ್ಣವಿ ಅಡ್ಕರ್ ವಿಶ್ವ ನಂ. 391 ವೈಷ್ಣವಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಕಿವೀಸ್‌ನ 22 5 2 6-2, 6-480 , 6-1, 6-380 ವ್ಯಾಲೆಂಟಿನಾ ಇವಾನೋವ್ ವಿರುದ್ಧ ಸುಲಭ ಜಯ ಸಾಧಿಸಿದರು.
900ಕ್ಕಿಂತ ಹೆಚ್ಚಿನ ರ್ಬ್ಯಾ೦ಕ್‌ನ ಎದುರಾಳಿಗಳಿಂದ ಭಾರತೀಯರಿಗೆ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ. ಥಾಯ್ಲೆಂಡ್ ಎದುರು ಸೋಲು: ಋತುಜಾ ಬೋಸಲೆ ಮತ್ತು ಅಂಕಿತಾ ರೈನಾ ಜೋಡಿ ಡಬಲ್ಸ್ ವಿಭಾಗದಲ್ಲಿ ಗೆಲುವು ಸಾಧಿಸಿದ ನಡುವೆಯೂ ಭಾರತ ತಂಡ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 1-2 ಅಂತರದಿಂದ ಪರಾಭವಗೊಂಡಿತು. ಮಂಗಳವಾರ ನಡೆದ ಮೊದಲ ಸಿಂಗಲ್ಸ್ನಲ್ಲಿ ವೈಷ್ಣವಿ ಅಡ್ಕರ್ ಸೋತಿದ್ದರೆ, ಮಳೆಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡ ಪಂದ್ಯದಲ್ಲಿ ಸಹಜಾ ಯಮಲಪಲ್ಲಿ 4-6, 6-1, 3-4ರಿಂದ ಹಿನ್ನಡೆಯಲ್ಲಿದ್ದರು.

ಬುಧವಾರ ಈ ಪಂದ್ಯ ಮುಂದುವರಿದಾಗ ವಿಶ್ವ ನಂ. 384 ಸಹಜಾ ನಿರ್ಣಾಯಕ ಸೆಟ್‌ನಲ್ಲಿ 4-6ರಿಂದ ವಿಶ್ವ ನಂ. 449 ಪ್ಯಾಚರಿನ್ ಚೀಪ್‌ಚಂಡೇಜ್ ಎದುರು ಪರಾಭವಗೊಂಡರು. ನಂತರ ಡಬಲ್ಸ್ ಕಾದಾಟದಲ್ಲಿ ಋತುಜಾ-ಅಂಕಿತಾ ಜೋಡಿ 6-3, 6-4 ನೇರಸೆಟ್‌ಗಳಿಂದ ಥಸಪೊರ್ನ್ ನಾಕ್ಕೊ-ಪೀಂಗ್‌ಟರ್ನ್ ಪ್ಲಿಪುಯೆಚ್ ಎದುರು ಒಂದು ಗಂಟೆ 11 ನಿಮಿಷಗಳಲ್ಲಿ ಸಮಾಧಾನಕರ ಗೆಲುವು ತಂದುಕೊಟ್ಟರು. ಒಟ್ಟು 6 ತಂಡಗಳಿರುವ ಟೂರ್ನಿಯಲ್ಲಿ ಅಗ್ರ 2 ತಂಡಗಳು ಪ್ಲೇಆಫ್ ಹಂತಕ್ಕೇರಿದರೆ, ಕೊನೇ 2 ತಂಡಗಳು ಗ್ರೂಪ್-2ಕ್ಕೆ ಹಿಂಬಡ್ತಿ ಪಡೆಯಲಿವೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
