Uncategorized

ನಗರಸಭೆ ಒಳಚರಂಡಿಯ ಕೊಳಚೆ ನೀರು ಕೆರೆಗೆ ಸೇರಿ ಸಾವಿರಾರು ಮೀನುಗಳು ಮೃತ

ಪಾಲನೆ ನ್ಯೂಸ್

ಚಾಮರಾಜನಗರ: ನಗರಸಭೆ ನಿರ್ಲಕ್ಷ್ಯದಿಂದ ಕೆರೆಯೊಂದರಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ. ನಗರದ ಸಮೀಪದಲ್ಲಿರುವ ಮೂಡ್ಲುಪುರ ಗ್ರಾಮದ ಕೆರೆಯಲ್ಲಿ ರೈತರು ಕೆರೆಗೆ ಮೀನುಗಳನ್ನು ಬಿಟ್ಟಿದ್ದರು. ಆದರೆ, ನಗರಸಭೆ ಒಳಚರಂಡಿಯ ಕೊಳಚೆ ನೀರು ಕೆರೆಗೆ ಸೇರುವ ಮೂಲಕ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂದು ರೈತ ಮುಖಂಡ ಹಾಲಿನ ನಾಗರಾಜು ಆರೋಪಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮೂಡ್ಲುಪುರ ಕೆರೆಗೆ ಒಳಚರಂಡಿ ಪೈಪ್ ಲೈನ್ ಹೊಡೆದು ಕೊಳಚೆ ನೀರು ಸೇರುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೂ ಈ ಹಿಂದೆ ಮನವಿ ಮಾಡಲಾಗಿತ್ತು.

ಆದರೆ, ಯಾವುದೇ ಕ್ರಮವಹಿಸದೇ ಇರುವುದರಿಂದ ಕೆರೆಗೆ ಒಳಚರಂಡಿ ನೀರು ಸೇರಿ ಸಾವಿರಾರು ಮೀನುಗಳು ಮೃತಪಟ್ಟಿವೆ ಎಂದು ದೂರಿದರು. ಈವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೆರೆಯ ನೀರು ಕುಡಿದು ದನ-ಕರುಗಳು ಮೃತಪಟ್ಟರೆ ನಗರಸಭೆಯ ಅಧಿಕಾರಿಗಳು ನೇರ ಹೊಣೆಯಾ ಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕೃಷ್ಣಪ್ಪ, ಪ್ರಿಯಾಕೃಷ್ಣ ಮೇಲೆ FIR

ಎಸ್.ಎಂ.ಕೃಷ್ಣರಂತಹ ಸುಸಂಸ್ಕೃತ ಮುಖ್ಯಮಂತ್ರಿಯನ್ನು ನಾನು ಕಂಡಿಲ್ಲ : ಶ್ರೀನಿವಾಸ ಜಿ.ಕಪ್ಪಣ್ಣ

‘ಸಬಲೀಕರಣಕ್ಕೆ ಶಿಕ್ಷಣವೊಂದೆ ಮಾರ್ಗ’ಪ್ರಸನ್ನಕುಮಾರ್ ಕೆರಗೋಡು ಅಭಿಮತ

Leave a Comment