NEWS

ಎಸ್‌ಎಸ್ ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ

ಪಾಲನೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2025-26) ಎಸ್‌ಎಸ್ ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ತೃತೀಯ ಭಾಷೆ ಕಲಿಕೆಗಷ್ಟೇ ಸೀಮಿತವಾಗಲಿದ್ದು, ಅಂಕವಾಗಿ ಪರಿಗಣನೆಯಾಗುವುದಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ವಿಚಾರವಾಗಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ 625 ಇದ್ದ ಅಂಕಗಳನ್ನು 525ಕ್ಕೆ ಪರಿಗಣಿಸಲಾಗುತ್ತದೆ.

ತೃತೀಯ ಭಾಷೆಗೆ ಇದ್ದ 100 ಅಂಕಗಳನ್ನು “ಗ್ರೇಡಿಂಗ್’ (ಎ,ಬಿ,ಸಿ ಮತ್ತು ಡಿ) ವ್ಯವಸ್ಥೆಯಾಗಿ ಪರಿಗಣಿಸಲಾಗುತ್ತದೆ ಹೊರತು ಒಟ್ಟಾರೆ ಫಲಿತಾಂಶದಲ್ಲಿ ಲೆಕ್ಕ ಹಾಕುವುದಿಲ್ಲ ಎಂದರು. ಹಿಂದಿ ಪರೀಕ್ಷೆ ನಿಗದಿಯಾಗಿರುವ ಮಾ.31ರಂದು ಹಿಂದಿ ಕಡ್ಡಾಯ ವಿರೋಧಿಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಸಿದ್ದವು. ಇದೀಗ ಸರ್ಕಾರ ಹಿಂದಿ ಪರೀಕ್ಷೆಗೂ ಮುನ್ನವೇ ಈ ತೀರ್ಮಾನ ಪ್ರಕಟಿಸಿದೆ. ಹಲವಾರು ರಾಜ್ಯಗಳು ಈಗಾಗಲೇ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತಂದಿವೆ ಮತ್ತು ಕೆಲವು ರಾಜ್ಯಗಳು ದ್ವಿಭಾಷಾ ನೀತಿಗೆ ಬದಲಾಗಿವೆ ಎಂದು ಸಚಿವ ಮಧು ಬಂಗಾರಪ್ಪ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 1.64 ಲಕ್ಷ ವಿದ್ಯಾರ್ಥಿಗಳ ಪೈಕಿ 1.48 ಲಕ್ಷ ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. ವಿಜಯವಾಣಿ ಚಿತ ತೃತೀಯ ಭಾಷೆ ಉತ್ತೀರ್ಣ/ಅನುತ್ತೀರ್ಣ ಪರಿಣಾಮ ಬೀರಲ್ಲ ಸಚಿವರು ಹೇಳಿದ್ದೇನು? 1 ತೃತೀಯ ಭಾಷೆ ಪರೀಕ್ಷೆ ಬರೆಯುವುದು ಕಡ್ಡಾಯ ಮೌಲ್ಯಮಾಪನದ ನಂತರ ಅಂಕ ಗ್ರೇಡ್ ಆಗಲಿದೆ 1 ಆದರೆ ಬೋಧನೆ, ಕಲಿಕಾ ವಿಧಾನ ಬದಲಾಗದು – ತೃತೀಯ ಭಾಷೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ತಗ್ಗಿಸಲು ನಿರ್ಧಾರ ಪಾಸ್, ಫೇಲ್ ಇರೋದಿಲ್ಲ ರಾಜ್ಯದಲ್ಲಿ ತೃತೀಯ ಭಾಷೆಯಾಗಿ ಹಿಂದಿ, ಇಂಗ್ಲಿಷ್, ಕನ್ನಡ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಇನ್ಮುಂದೆ ಗ್ರೇಡಿಂಗ್ ವ್ಯವಸ್ಥೆ ಅಂಕ ನೀಡುವುದಿಲ್ಲ. ಹೀಗಾಗಿ ಉತ್ತೀರ್ಣ/ಅನುತ್ತೀರ್ಣ ಫಲಿತಾಂಶದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಕುಬ್ಬರು! ಶೇ.14ರಷ್ಟು ಬೆಳವಣಿಗೆ ಕುಂಠಿತ | ಒಟ್ಟು 32.17 ಲಕ್ಷ ಚಿಣ್ಣರ ತಪಾಸಣೆ |

ಇಂದಿರಾ ಕಿಟ್ ವಿತರಿಸಲು ಸಿಎಂ ಘೋಷಣೆ

ಮುಡಾ 50:50 ನಿವೇಶನಗಳ ಹಂಚಿಕೆ ಆರೋಪ ಸಿಎಂ, ಮತ್ತವರ ಕುಟುಂಬಕ್ಕೆ ನೋಟಿಸ್

Leave a Comment